22ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಭಾರತೀಯ ಸೇನೆ ಕಾಶ್ಮೀರದ ಕಣಿವೆ ಹಾಗೂ ಲಡಾಖ್ನ ಭಯಾನಕ ಪರ್ವತಗಳಲ್ಲಿ 1000 ಕಿಲೋಮೀಟರ್ಗಿಂತಲೂ ಹೆಚ್ಚು ದೂರದವರೆಗೆ 2 ಬೈಕ್ ರ್ಯಾಲಿಗಳನ್ನು ನಡೆಸಿದೆ. ಡ್ರಾಸ್ನಲ್ಲಿರುವ ಐತಿಹಾಸಿಗ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಸೇರಿದ ಭಾರತೀಯ ಸೇನೆ ಹುತಾತ್ಮರಿಗೆ ಗೌರವ ಸಲ್ಲಿಸಿದೆ.
ಒಂದು ಬೈಕ್ ರ್ಯಾಲಿಯನ್ನು ಮುನ್ನೆಡಿಸಿದ ಉತ್ತರ ಸೈನ್ಯದ ಕಮಾಂಡರ್ ಲೆಫ್ಟಿನಂಟ್ ಜನರಲ್ ವೈ.ಕೆ. ಜೋಶಿ ಕೂಡ ಸ್ವತಃ ಕಾರ್ಗಿಲ್ ಹೀರೋ ಆಗಿದ್ದಾರೆ. 11,649 ಅಡಿಯಲ್ಲಿರುವ ಭಯಾನಕ ಜೋಜಿಲಾ ಪಾಸ್ನ್ನು ಬೈಕ್ ಸವಾರರು ದಾಟುವ ಮುನ್ನ ವೈ.ಕೆ ಜೋಶಿ ಹೌ ಈಸ್ ದ ಜೋಶ್..? (How is the josh..?) ಎಂದು ಕೇಳಿದ್ದಾರೆ. ಇದಕ್ಕೆ ಸವಾರರು ಹೈ ಸರ್ (High Sir) ಎಂದು ಉತ್ತರ ನೀಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟ್ವಿಟರ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು ಆರ್ಮಿ ಕಮಾಂಡರ್ ತಂಡವನ್ನ ಮುನ್ನಡೆಸೋದು ಅಂದರೆ ಜೋಶ್ ಹೆಚ್ಚಾಗಿಯೇ ಇರಬೇಕು ಎಂದು ಶೀರ್ಷಿಕೆ ನೀಡಲಾಗಿದೆ.