ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ನಾಸಾ ಗಗನಯಾತ್ರಿ ಮೆಗಾನ್ ಮೆಕ್ ಅರ್ಥರ್ ಇತ್ತೀಚೆಗೆ ಬಹಳ ಆಸಕ್ತಿದಾಯಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನಿಮ್ಮನ್ನು ಕುತೂಹಲ ಕೆರಳಿಸುವುದು ಮಾತ್ರ ಗ್ಯಾರಂಟಿ.
ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ತಮ್ಮ ಕೂದಲನ್ನು ಹೇಗೆ ಸ್ವಚ್ಛವಾಗಿರಿಸಿಕೊಳ್ಳುತ್ತಾರೆ ಎಂಬುದನ್ನು ವಿವರಿಸುವ ವಿಡಿಯೋ ಸದ್ಯ ವೈರಲ್ ಆಗಿದೆ.
“ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಸ್ನಾನ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನೀರು ಎಲ್ಲೆಡೆ ಹೋಗುತ್ತದೆ. ಹಾಗಾಗಿ ನಾವು ಕೂದಲನ್ನು ಹೇಗೆ ಸ್ವಚ್ಛವಾಗಿರಿಸುತ್ತೇವೆ ಎಂಬುದನ್ನು ತೋರಿಸಲು ನಾನು ಯೋಚಿಸಿದೆ. ಭೂಮಿಯ ಮೇಲೆ ನಾವು ಲಘುವಾಗಿ ಪರಿಗಣಿಸುವ ಸರಳ ವಸ್ತುಗಳು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಅಷ್ಟು ಸರಳವಲ್ಲ” ಎಂದು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
BIG NEWS: ಮತ್ತೊಂದು ದಾಖಲೆ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಕೆಲವು ದಿನಗಳ ಹಿಂದಷ್ಟೇ ಹಂಚಿಕೊಳ್ಳಲಾದ ಈ ವಿಡಿಯೋ, 39,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಟನ್ ಗಟ್ಟಲೇ ಕಾಮೆಂಟ್ ಗಳು ಇದಕ್ಕೆ ಬಂದಿವೆ. ಒಬ್ಬ ಬಳಕೆದಾರರು ಅದ್ಭುತ ಪ್ರದರ್ಶನಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ. ಮತ್ತೊಬ್ಬರು, ನೀವು ತಲೆಗೆ ಹಾಕುತ್ತಿರುವ ಆ ಶಾಂಪೂ ವಿಧಾನವನ್ನು ಭೂಮಿಯ ಮೇಲೆ ಮಾಡಿದರೆ ಸಾಕಷ್ಟು ನೀರು ಉಳಿಸಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
https://twitter.com/Astro_Megan/status/1432708693267779607?ref_src=twsrc%5Etfw%7Ctwcamp%5Etweetembed%7Ctwterm%5E1432708693267779607%7Ctwgr%5E%7Ctwcon%5Es1_&ref_url=https%3A%2F%2Fwww.hindustantimes.com%2Ftrending%2Fhow-do-astronauts-wash-their-hair-while-aboard-iss-viral-video-shows-101630558808057.html