
ದೇಶದ ಅತ್ಯಂತ ಜನಪ್ರಿಯ ಬಿಸ್ಕಿಟ್‌ಗಳಲ್ಲಿ ಒಂದಾದ ಪಾರ್ಲೆ-ಜಿ ಇತ್ತೀಚೆಗೆ ಡೂಡಲ್ ಒಂದನ್ನು ಶೇರ್ ಮಾಡಿದ್ದು, ದೇಶವಾಸಿಗಳ ಕುಶಲೋಪರಿ ವಿಚಾರಿಸಿದೆ.
ಕೆಂಪು ಹಿನ್ನೆಲೆಯಲ್ಲಿ ದುರ್ಬೀನು ಹಿಡಿದುಕೊಂಡಿರುವ ಪಾರ್ಲೆ-ಜಿ ಬಿಸ್ಕತ್ತು, “Zoom in for a Genius fact!’” ಎನ್ನುತ್ತಿದ್ದು, ಕೊಂಚ ಜ಼ೂಮ್ ಮಾಡಿ ನೋಡಿದ ಮೇಲೆ, “ನೀವು ಚೆನ್ನಾಗಿದ್ದೀರಿ, ಈ ಬಗ್ಗೆ ಹೆಮ್ಮೆ ಪಡಿ,” ಎಂದು ಬರೆಯಲಾಗಿದೆ.
ಮನೆಯಲ್ಲಿರುವ ಎಲ್ಲ ಮಕ್ಕಳಿಗೂ ಸಿಗಲಿದೆ ಹಣ..!
ತಮ್ಮ ಫಾಲೋವರ್‌ಗಳನ್ನು ಖುಷಿ ಪಡಿಸಿ, ಯೋಗಕ್ಷೇಮ ವಿಚಾರಿಸಲು ಹೀಗೆ ಮಾಡಿದ್ದಾಗಿ ತಿಳಿಸಿದ ಪಾರ್ಲೆ-ಜಿ, ನೋಡುಗರಿಗೆ ತಮಗೆ ಹೇಗೆ ಅನಿಸುತ್ತಿದೆ ಎಂದು ಕಾಮೆಂಟ್ ಮಾಡಿ ತಿಳಿಸಲು ಕೋರಿದೆ. #SelfLove, #SelfCare ಹಾಗೂ #MentalHealth ಟ್ಯಾಗ್‌ಗಳನ್ನು ಪೋಸ್ಟ್‌ಗೆ ಹಾಕಲಾಗಿದೆ.
https://www.instagram.com/p/CR0sb2Ziqni/?utm_source=ig_web_copy_link