ಪ್ರವಾಸೋದ್ಯಮ ಚಟುವಟಿಕೆ ಕಾಣದೇ ಬಿಕೋ ಎನ್ನುತ್ತಿರುವ ದೂರದ ಊರುಗಳಿಗೆ ಪ್ರವಾಸಿಗರನ್ನು ಕರೆ ತರಲು ’ರಿಯಲ್’ ಪ್ಲಾನ್ ಒಂದನ್ನು ಮಾಡಿರುವ ಇಟಲಿ ಸರ್ಕಾರ, ಸುಂದರವಾದ ಗ್ರಾಮೀಣ ಪ್ರದೇಶಗಳಲ್ಲಿರುವ ಮನೆಗಳನ್ನು ತಲಾ ಒಂದು ಯೂರೋಗೆ (87 ರೂಪಾಯಿ) ಮಾರಾಟ ಮಾಡಲು ನಿರ್ಧರಿಸಿದೆ.
ರಾಜಧಾನಿ ರೋಮ್‌ನ ಲ್ಯಾಟಿಯಂ ಪ್ರದೇಶದಲ್ಲಿರುವ ಮನೇಜ಼ಾ ಎಂಬ ಊರಿನ ಮನೆಗಳನ್ನು ಒಂದು ಯೂರೋಗೆ ಮಾರಾಟಕ್ಕೆ ಇಡಲಾಗಿದೆ. ಈ ಊರಿನಲ್ಲಿರುವ ಡಜ಼ನ್‌ಗಟ್ಟಲೇ ಖಾಲಿ ಮನೆಗಳನ್ನು ಶೀಘ್ರವೇ ಮಾರಾಟಕ್ಕೆ ಇಡಲಾಗುವುದು. ಮೊದಲ ಸುತ್ತಿನಲ್ಲಿ ಮಾರಾಟವಾಗುವ ಮನೆಗಳ ಖರೀದಿಗೆ ಅರ್ಜಿ ಸಲ್ಲಿಕೆಗೆ ಆಗಸ್ಟ್ 28 ಕೊನೆಯ ದಿನಾಂಕವಾಗಿದೆ.
ರೋಮ್‌ನಿಂದ 70 ಕಿಮೀ ಆಗ್ನೇಯದಲ್ಲಿರುವ “ನಗರದ ಕೇಂದ್ರದಲ್ಲಿರುವ ಮಧ್ಯಪ್ರಚ್ಯ ಕಾಲದ ಈ ಊರನ್ನು ಬಿಟ್ಟು ಹೋಗುತ್ತಿರುವುದರ ವಿರುದ್ಧ ಪ್ರತಿರೋಧ ಒಡ್ಡಲು” ಪಟ್ಟಣದ ಆಡಳಿತ ನಿರ್ಧರಿಸಿದೆ.
ಭೋಜ್ಪುರಿ ನಟಿಯ ಬೆತ್ತಲೆ ವಿಡಿಯೋ ವೈರಲ್
ಆದರೆ ಇಲ್ಲೊಂದು ಶರತ್ತಿದೆ. ಮನೇಜ಼ಾದಲ್ಲಿ ಆಸ್ತಿ ಖರೀದಿ ಮಾಡುವ ಮಂದಿ ಮುಂದಿನ ಮೂರು ವರ್ಷಗಳಲ್ಲಿ ಅವುಗಳನ್ನು ಮರುನಿರ್ಮಾಣ ಮಾಡಬೇಕಾಗುತ್ತದೆ. ಅಲ್ಲದೇ ಗ್ಯಾರಂಟಿ ಠೇವಣಿಯಾಗಿ 5000 ಯೂರೋಗಳನ್ನೂ ಪಾವತಿ ಮಾಡಬೇಕಾಗುತ್ತದೆ. ಈ ಹಣವನ್ನು ಆಸ್ತಿ ಮರುನಿರ್ಮಾಣ ಪೂರ್ಣಗೊಳ್ಳುತ್ತಲೇ ಮರಳಿಸಲಾಗುವುದು.
ಮನೆಯೊಂದನ್ನು ಖರೀದಿ ಮಾಡುವ ಮುನ್ನವೇ ಅದನ್ನು ಹೇಗೆ ಬಳಸಬೇಕೆಂದು — ಮನೆ, ರೆಸ್ಟೋರೆಂಟ್, ಕೆಫೆ ಇತ್ಯಾದಿ — ಖರೀದಿದಾರರು ಪ್ಲಾನ್ ಅನ್ನು ಮೊದಲೇ ಕೊಡಬೇಕಾಗುತ್ತದೆ.
ಗ್ರಾಮಗಳಲ್ಲಿ ಜನಸಂಖ್ಯೆ ಕುಸಿಯುತ್ತಿರುವ ಕಾರಣ ಹೀಗೆ ಒಂದು ಯೂರೋಗೆ ಮನೆ ಮಾರಾಟ ಮಾಡುವ ಕೆಲಸಕ್ಕೆ ಕಳೆದ ವರ್ಷ ಇಲ್ಲಿನ ಲ್ಯಾಡ್‌ಬೈಬಲ್ ಗ್ರಾಮದಲ್ಲಿ ಚಾಲನೆ ನೀಡಲಾಗಿದೆ.