ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಎಂದಾದರೂ ಉಚಿತವಾಗಿ ಕೊಠಡಿಗಳು ಲಭ್ಯವಿರುವ ಬಗ್ಗೆ ಕೇಳಿದ್ದೀರಾ..? ಐಬಿಜಾ ದ್ವೀಪದಲ್ಲಿರುವ ಜನರಿಗೆ ಕೊಠಡಿಗಳಲ್ಲಿ ಉಚಿತವಾಗಿ ರಾತ್ರಿ ಉಳಿಯಲು ಅವಕಾಶ ನೀಡಲಾಗುತ್ತಿದೆ.
ಹಾಗಾದರೆ ಉಚಿತವಾಗಿ ನೀವಿಲ್ಲ ಹಾಯಾಗಿ ಇರಬಹುದು ಎಂದು ನೀವು ಭಾವಿಸಿದ್ದರೆ ಇಲ್ಲೊಂದು ಟ್ವಿಸ್ಟ್ ಇದೆ. ಅದೇನೆಂದರೆ ನೀವಿಲ್ಲಿ ಹಣ ಪಾವತಿ ಮಾಡಬೇಕಾಗಿಲ್ಲ. ಬದಲಾಗಿ ನಿಮ್ಮ ಗೌಪ್ಯತೆಯನ್ನು ಪಾವತಿ ಮಾಡಬೇಕು.
ಪ್ಯಾರಡಿಸೋ ಆರ್ಟ್ ಹೋಟೆಲ್ನಲ್ಲಿರುವ ಈ ಕೊಠಡಿಗಳಿಗೆ ಪಾರದರ್ಶಕ ಗೋಡೆಗಳು ಇರುತ್ತವೆ. ಇಂತಹ ಪಾರದರ್ಶಕ ಗೋಡೆಗಳನ್ನು ಹೊಂದಿರುವ ಕೋಣೆಯಲ್ಲಿ ನೀವು ಉಚಿತವಾಗಿ ಉಳಿಯಬಹುದು. ಹೋಟೆಲ್ನ ಲಾಬಿಯಲ್ಲಿ ಈ ಪಾರದರ್ಶಕ ಕೋಣೆ ಇರುತ್ತದೆ.
ಈ ಕೋಣೆಯನ್ನು ಗಾಜಿನ ಗೋಡೆಯ ಕೊಠಡಿ ಎಂದು ವಿವರಿಸಿದ ಪ್ಯಾರಡಿಸೋ ವೆಬ್ಸೈಟ್ ಇದು ವಾಲ್ಫ್ಲವರ್ಗಳನ್ನು ಇಡಲು ಸೂಕ್ತವಾದ ಕೋಣೆಯಲ್ಲ. ಕಲಾತ್ಮಕ ಪ್ರದರ್ಶನಗಳು, ರೆಡಿಯೋ ಪ್ರಸಾರ, ಡಿಜೆ ಸೆಟ್ಗಳು ಇಲ್ಲಿ ಲಭ್ಯವಿದೆ. ನೀವೇ ಆಕರ್ಷಣೆಯ ಕೇಂದ್ರಬಿಂದುವಾಗಿರಬೇಕು ಎಂದು ಭಾವಿಸವವರೆಗೂ ಈ ಕೊಠಡಿಯನ್ನು ಉಚಿತವಾಗಿ ಎಂಜಾಯ್ ಮಾಡಬಹುದು ಎಂದು ಬರೆಯಲಾಗಿದೆ.