alex Certify ದೇಗುಲಕ್ಕೆ ಬಂದಿದ್ದ ಸಂಬಂಧಿ ಮೇಲೆ ಅತ್ಯಾಚಾರವೆಸಗಿದ ಅರ್ಚಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಗುಲಕ್ಕೆ ಬಂದಿದ್ದ ಸಂಬಂಧಿ ಮೇಲೆ ಅತ್ಯಾಚಾರವೆಸಗಿದ ಅರ್ಚಕ

ವಿವಾಹಿತ ಅರ್ಚಕನೊಬ್ಬ ತನ್ನ ಸಂಬಂಧಿಗೆ ನಿದ್ರೆ ಮಾತ್ರೆ ನೀಡಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ, ಆರೋಪಿ 36 ವರ್ಷದ ಅರ್ಚಕನಿಗೆ ನಾಲ್ವರು ಮಕ್ಕಳಿದ್ದಾರೆ. ಸಂತ್ರಸ್ತೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ನೀಡಿರುವ ಮಾಹಿತಿಯ ಪ್ರಕಾರ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ.

ಸಂತ್ರಸ್ತೆ ನೀಡಿರುವ ಮಾಹಿತಿಯ ಪ್ರಕಾರ, ಭಾನುವಾರ ಸಂಜೆ ಜೈಚಾಂದ್​ ಪುರಾ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ತೆರಳಿದ್ದಳು. ಈ ವೇಳೆ ಆಕೆಯ ಪತಿ ಹಾಗೂ ತಂದೆ ಕೂಡ ಜೊತೆಯಿದ್ದರು. ಆದರೆ ಅರ್ಚಕ ಆಕೆಯ ಪತಿ ಹಾಗೂ ತಂದೆಯನ್ನು ಏನೋ ಕೆಲಸ ನೀಡಿ ದೇವಸ್ಥಾನದಿಂದ ಹೊರಗೆ ಕಳುಹಿಸಿದ್ದ ಎನ್ನಲಾಗಿದೆ.

ಇಬ್ಬರೂ ದೇಗುಲದಿಂದ ತೆರಳಿದ ಬಳಿಕ ಆಕೆಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದಾನೆ. ಮಾರನೇ ದಿನ ಬೆಳಗ್ಗೆ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಮನೆಗೆ ಬಿಟ್ಟು ಬಂದಿದ್ದ. ಮನೆಗೆ ತೆರಳಿದ ಮಹಿಳೆ ತನ್ನ ಮೇಲೆ ನಡೆದ ದುಷ್ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾಳೆ.

ಇದಾದ ಬಳಿಕ ಮಹಿಳೆ ಕುಟುಂಬಸ್ಥರು ಅರ್ಚಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಆತ ಅಷ್ಟರಲ್ಲಾಗಲೇ ಪರಾರಿಯಾಗಿದ್ದ. ಹೀಗಾಗಿ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು.
ವರದಿಯ ಪ್ರಕಾರ ಆರೋಪಿಯು ವಿರಾಟ್​ ನಗರದ ಬೆಟ್ಟದಲ್ಲಿರುವ ಸಣ್ಣ ದೇಗುಲದಲ್ಲಿ ಅಡಗಿದ್ದ ಎನ್ನಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...