ಗಾಂಪ ಮಲ್ಲಯ್ಯ ದೇವರ ಪೂಜಾರಿಯೊಬ್ಬರು ವಾರ್ಷಿಕ ಪೂಜೆಯ ನೃತ್ಯ ಮಾಡುತ್ತಾ, ಸಮೀಪದ ಕಲ್ಲಿನ ಗುಡ್ಡದ ಮೇಲೇರಿ ಕುಣಿಯುತ್ತಿದ್ದರು. ಕಾಲು ಜಾರಿದ ಪರಿಣಾಮ ಕೆಳಗಿನ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ.
35 ಎಕರೆ ಅರಣ್ಯ ‘ಆಮ್ಲಜನಕ ಪಾರ್ಕ್’ ಆಗಿ ಅಭಿವೃದ್ಧಿ
ಈ ಘಟನೆಯ ವಿಡಿಯೊ ಭಕ್ತರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ದುರಂತವು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಆನಂದರಾವ್‍ಪೇಟ್ ಗ್ರಾಮದಲ್ಲಿ ಶನಿವಾರ ಜರುಗಿದೆ.
ಶ್ರಾವಣ ಮಾಸದಲ್ಲಿ ಪ್ರತಿ ವರ್ಷ ನಾಲ್ಕು ಬಾರಿ ಈ ರೀತಿಯ ಗುಡ್ಡ ಏರಿ ಪೂಜೆ ಸಲ್ಲಿಸುವ ಸಂಪ್ರದಾಯ ಪೂಜಾರಿ ಅಪ್ಪಾ ಪಾಪಯ್ಯ ಅವರದ್ದಾಗಿತ್ತು. ಇವರ ಅಜ್ಜ ಕೂಡ ಇದೇ ಮಾದರಿಯಲ್ಲಿ ಹಲವು ವರ್ಷಗಳ ಮುನ್ನ ಮೃತರಾಗಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.