alex Certify BREAKING : ಹಾವೇರಿಯಲ್ಲಿ ಭೀಕರ ಅಪಘಾತ : ಟ್ರಕ್ ಹರಿದು ಇಬ್ಬರು ಬೈಕ್ ಸವಾರರ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಹಾವೇರಿಯಲ್ಲಿ ಭೀಕರ ಅಪಘಾತ : ಟ್ರಕ್ ಹರಿದು ಇಬ್ಬರು ಬೈಕ್ ಸವಾರರ ದುರ್ಮರಣ

ಹಾವೇರಿ : ಹಾವೇರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಟ್ರಕ್ ಹರಿದು ಇಬ್ಬರು ಬೈಕ್ ಸವಾರರು ದುರ್ಮರಣಕ್ಕೀಡಾದ ಘಟನೆ ಇಂದು ನಡೆದಿದೆ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬೈಕ್ ಸವಾರರ ಮೇಲೆ ಟ್ರಕ್ ಹರಿದು ಮೃತಪಟ್ಟಿದ್ದಾರೆ.  ಹಿಂದಿನಿಂದ ಬಂದ ಟ್ರಕ್ ಬೈಕ್ ಗೆ ಡಿಕ್ಕಿ ಹೊಡೆದಿದೆ.  ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಬೈಕ್ ಸವಾರರ ಮೇಲೆ ಟ್ರಕ್ ಹರಿದಿದೆ ಎನ್ನಲಾಗಿದೆ. ಮೃತರನ್ನು ಶಿಗ್ಗಾಂವಿ ತಾಲೂಕಿನ ಚಾಕಾಪೂರ ಗ್ರಾಮದ ಬೈಕ ಸವಾರರಾದ ನಿಂಗಪ್ಪ(40), ಶರೀಫ್(45) ಎಂದು ಗುರುತಿಸಲಾಗಿದೆ.ವಾಹನವೊಂದನ್ನು ಬೈಕ್ ಸವಾರರು ಓವರ್ ಟೇಕ್ ಮಾಡಲು ಹೋಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...