ಮಹಿಳೆಯರ ಖಾಸಗಿತನಕ್ಕೆ ಗೌರವ ನೀಡಬೇಕು. ಮಹಿಳೆಯರ ಜೀವನಶೈಲಿಯನ್ನು ಪ್ರಶ್ನೆ ಮಾಡುವ ಅಧಿಕಾರ ಪುರುಷರಿಗೆ ಇಲ್ಲ. ಮಹಿಳೆಯರ ಗೌರವಕ್ಕೆ ಚ್ಯುತಿ ತರುವವರ ವಿರುದ್ಧ ಹಾಂಕಾಂಗ್ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿದೆ. ಮಹಿಳೆಯರ ಸ್ಕರ್ಟ್ ಕೆಳಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವವರನ್ನು ನೇರವಾಗಿ ಜೈಲಿಗೆ ಕಳಿಸೋದಾಗಿ ಹೇಳಿದೆ.
ಹೊಸ ನಿಯಮಗಳ ಪ್ರಕಾರ, ಮಹಿಳೆಯ ಖಾಸಗಿ ಅಂಗಾಂಗಗಳ ಫೋಟೋವನ್ನು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವವರ ವಿರುದ್ಧ 5 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಹಾಂಕಾಂಗ್ ಸರ್ಕಾರ ಅನುಮತಿ ನೀಡಿದೆ.
ಕೇವಲ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರವಲ್ಲದೇ ಖಾಸಗಿ ಸ್ಥಳಗಳಲ್ಲೂ ಇಂತಹ ಚಿತ್ರಗಳನ್ನು ತೆಗೆಯುವುದು ಹಾಗೂ ರೆಕಾರ್ಡಿಂಗ್ ಮಾಡೋದು ಅಪರಾಧ ಎಂದು ಪರಿಗಣಿಸಲಾಗಿದೆ.
ಈ ರೀತಿಯ ಪ್ರಕರಣಗಳು ದೇಶದಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಹಾಂಕಾಂಗ್ ಸರ್ಕಾರ ಈ ಕಾನೂನನ್ನು ಜಾರಿಗೆ ತಂದಿದೆ ಎನ್ನಲಾಗಿದೆ. ಹೊಸ ಕಾನೂನು ಜಾರಿಗೆ ಬಂದ ಬಳಿಕ ಇಂತಹ ದೂರುಗಳು ಕಡಿಮೆಯಾಗಲಿದೆ ಎಂದು ನಂಬಲಾಗಿದೆ.