ನಿದ್ರಾಹೀನತೆ ಅನೇಕ ಸಮಸ್ಯೆಗಳನ್ನುಂಟು ಮಾಡುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬಂದಿಲ್ಲವೆಂದ್ರೆ ಬೆಳಿಗ್ಗೆ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ. ಅನೇಕರು ಕಚೇರಿಗೆ ಹೋಗುವ ವೇಳೆ ವಾಹನದಲ್ಲಿ ನಿದ್ರೆ ಮಾಡುತ್ತಾರೆ. ಬಸ್, ಕಾರ್, ವಿಮಾನ ಹೀಗೆ ಕಂಡ ಕಂಡಲ್ಲಿ ನಿದ್ರೆ ಮಾಡುವವರಿಗೆ ಒಳ್ಳೆಯ ಸುದ್ದಿ ಇದೆ.
ಹಾಂಕಾಂಗ್‌ನಲ್ಲಿ ಅಂತಹವರಿಗಾಗಿ ವಿಶೇಷ ಬಸ್ ಪ್ರವಾಸವನ್ನು ಪ್ರಾರಂಭಿಸಲಾಗಿದೆ. ಬಸ್ ನಲ್ಲಿ ಕುಳಿತು ನೀವು ಪ್ರವಾಸಕ್ಕೆ ಹೋಗುವುದಲ್ಲ. ಮಲಗಲು ನೀವು ಬಸ್ ಹತ್ತಬೇಕು. ಐದು ಗಂಟೆಗಳ ಬಸ್ ಪ್ರಯಾಣಕ್ಕಾಗಿ ಪ್ರಯಾಣಿಕರು ಟಿಕೆಟ್ ಖರೀದಿಸಬೇಕು. ಆದರೆ ಯಾವುದೇ ಸ್ಥಳ ತಲುಪುವುದಿಲ್ಲ.
ಈ ಡಬಲ್ ಡೆಕ್ಕರ್ ಬಸ್ 76 ಕಿಮೀಗಳನ್ನು 5 ಗಂಟೆಗಳಲ್ಲಿ ಕ್ರಮಿಸುತ್ತದೆ. ಈ ದೀರ್ಘ ಪ್ರಯಾಣದಲ್ಲಿ ಪ್ರಯಾಣಿಕರು ಆರಾಮವಾಗಿ ಮಲಗಲು ಸಾಧ್ಯವಾಗುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಆರಾಮವಾಗಿ ಮಲಗುವ ಜನರು, ಮನೆಯ ಹಾಸಿಗೆ ಮೇಲೆ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಈ ಸೇವೆ ಶುರು ಮಾಡಲಾಗಿದೆ.
ಹಸಿರು ಪಟಾಕಿ ಎಂದರೇನು…? ಇಲ್ಲಿದೆ ಈ ಕುರಿತ ಮಾಹಿತಿ
ಈ ಬಸ್ ಗೆ 1,000 ರೂಪಾಯಿಯಿಂದ 3,800 ರೂಪಾಯಿ ಟಿಕೆಟ್ ಇದೆ. ಸೀಟ್ ಗೆ ತಕ್ಕಂತೆ ಟಿಕೆಟ್ ನೀಡಲಾಗುತ್ತದೆ. ಕಣ್ಣಿನ ಮಾಸ್ಕ್ ಮತ್ತು ಇಯರ್ ಪ್ಲಗ್‌ಗಳನ್ನು ಸಹ ನೀಡಲಾಗುತ್ತದೆ.
ಕಳೆದ ಶನಿವಾರದಿಂದ ಆರಂಭವಾದ ಸ್ಲೀಪಿಂಗ್ ಬಸ್ ಟೂರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಟಿಕೆಟ್‌ಗಳು ಅಲ್ಪಾವಧಿಯಲ್ಲಿಯೇ ಸೋಲ್ಡ್ ಔಟ್ ಆಗಿದ್ದವು. ಇದರಲ್ಲಿ ಪ್ರಯಾಣಿಸಲು ಜನರು ಶೂ ಬದಲು ಚಪ್ಪಲಿ ಧರಿಸಿ ಕಂಬಳಿ, ದಿಂಬುಗಳನ್ನು ತಂದಿದ್ದರು.