

ಕಾರವಾರ: ಶಾಸಕ ಭೀಮಣ್ಣ ನಾಯಕ ಅವರ ಮೇಲೆ ಜೇನು ನೊಣಗಳು ದಾಳಿ ನಡೆಸಿವೆ. ಶಿರಸಿ ನಗರಕ್ಕೆ ನೀರಿನ ಲಭ್ಯತೆ ಪರಿಶೀಲಿಸಲು ಅಧಿಕಾರಿಗಳೊಂದಿಗೆ ಕೆಂಗ್ರೆ ಹೊಳೆಗೆ ತೆರಳಿದ್ದ ಸಂದರ್ಭದಲ್ಲಿ ಜೇನುನೊಣಗಳು ದಾಳಿ ಮಾಡಿವೆ.
7 ಜೇನುನೊಣಗಳು ಕಡಿದು ಮುಖದ ಮೇಲೆ ಗಾಯ ಉಂಟಾಗಿದ್ದರಿಂದ ಭೀಮಣ್ಣ ನಾಯಕ ಅವರನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಶಾಸಕರೊಂದಿಗೆ ಇದ್ದ ಪೌರಾಯುಕ್ತ ಕಾಂತರಾಜ್ ಮತ್ತು ನಗರಸಭೆ ಸದಸ್ಯರಾದ ಅಬ್ದುಲ್ ಖಾದರ್ ಆನವಟ್ಟಿ, ಪ್ರದೀಪ ಶೆಟ್ಟಿ ಅವರಿಗೂ ಜೇನು ಹುಳಗಳು ಕಡಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.