
ಮಂಡ್ಯ: ಹೆಜ್ಜೇನು ದಾಳಿಯಿಂದ 40 ಕ್ಕೂ ಅಧಿಕ ಜನ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ನಡೆದಿದೆ.
ಧರ್ಮರಾಜ್ ಎಂಬುವವರ ಶವಸಂಸ್ಕಾರಕ್ಕೆ ತೆರಳಿದ್ದಾಗ ಘಟನೆ ನಡೆದಿದ್ದು, ಹೆಜ್ಜೆನು ದಾಳಿಯಿಂದ 40ಕ್ಕೆ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಂತ್ಯಕ್ರಿಯೆ ವೇಳೆ ಹಚ್ಚಿದ ಅಗರಬತ್ತಿ ಹೊಗೆ ಜೇನುಗೂಡಿಗೆ ತಾಗಿ ಹೆಜ್ಜೇನು ಹುಳಗಳು ಅಲ್ಲಿದ್ದವರ ಮೇಲೆ ದಾಳಿ ಮಾಡಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.