ಹೋಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ ಲೀ, ತನ್ನ ಹೋಂಡಾ ಶೈನ್ ಮಾಡೆಲ್‌ನ ಒಂದು ಕೋಟಿ ಘಟಕಗಳು ಭಾರತದಲ್ಲಿ ಮಾರಾಟವಾಗಿವೆ ಎಂದು ತಿಳಿಸಿದೆ.
ಎಂದಿಗೂ ಬೇಡಿಕೆಯಲ್ಲೇ ಇರುವ ಹೋಂಡಾ ಶೈನ್ ಮಾರುಕಟ್ಟೆಯ 50%ಗಿಂತ ಹೆಚ್ಚಿನ ಪಾಲು ಹೊಂದಿದ್ದು, 125ಸಿಸಿ ಸೆಗ್ಮೆಂಟ್‌ನ ನಂ.1 ಆಗಿದೆ. ವರ್ಷದಿಂದ ವರ್ಷಕ್ಕೆ 29 ಪ್ರತಿಶತ ಪ್ರಗತಿಯನ್ನೂ ಶೈನ್ ದಾಖಲಿಸಿದೆ. 125ಸಿಸಿ ಸೆಗ್ಮೆಂಟ್‌ನಲ್ಲಿ ಒಂದು ಕೋಟಿಯ ಮಟ್ಟ ತಲುಪಿದ ಮೊದಲ ಬೈಕ್ ಹೋಂಡಾ ಶೈನ್ ಆಗಿದೆ.
ಇಲ್ಲಿದೆ ಲಕ್ಷ ರೂ. ಒಳಗೆ ಸಿಗುವ ಟಾಪ್ ಬೈಕ್ ಗಳ ಪಟ್ಟಿ
ಈ ಸಾಧನೆ ಬಗ್ಗೆ ಮಾತನಾಡಿದ, ಹೋಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಓ ಅಟ್ಸುಶಿ ಒಗಾಟಾ, “ವರ್ಷಗಳಿಂದಲೂ ಶೈನ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ನಾವು ಸಂತಸಗೊಂಡಿದ್ದೇವೆ. ಶೈನ್‌ನಲ್ಲಿ ಭಾರತವು 2022ಕ್ಕೆ ಚಲಿಸುತ್ತಲೇ, ಹೊಸ ಸವಾಲುಗಳನ್ನು ತೆಗೆದುಕೊಂಡು, ನಮ್ಮ ಗ್ರಾಹಕರನ್ನು ಉತ್ತಮ ಉತ್ಪನ್ನಗಳೊಂದಿಗೆ ಸಂತಸಪಡಿಸಲು ನಾವು ಬದ್ಧರಾಗಿದ್ದೇವೆ. ಹೋಂಡಾ ಫ್ಯಾಮಿಲಿ ಪರವಾಗಿ, ನಾನು ನಮ್ಮ ಗ್ರಾಹಕರಿಗೆ ನಮ್ಮ ಬ್ರಾಂಡ್ ಮೇಲೆ ಮೌಲ್ಯಯುತವಾದ ನಂಬಿಕೆ ಇಟ್ಟಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ,” ಎಂದಿದ್ದಾರೆ.