alex Certify ಹೈನೆಸ್‌ ಸಿಬಿ350 ಯ ವಾರ್ಷಿಕೋತ್ಸವದ ಎಡಿಷನ್‌ ಬಿಡುಗಡೆ ಮಾಡಿದ ಹೋಂಡಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈನೆಸ್‌ ಸಿಬಿ350 ಯ ವಾರ್ಷಿಕೋತ್ಸವದ ಎಡಿಷನ್‌ ಬಿಡುಗಡೆ ಮಾಡಿದ ಹೋಂಡಾ

ತನ್ನ ಹೈನೆಸ್‌ ಸಿಬಿ350 ಬೈಕ್‌ನ ವಾರ್ಷಿಕೋತ್ಸೊವದ ಪ್ರಯುಕ್ತ ವಿಶೇಷ ಅವತರಣಿಕೆಯ ಬೈಕ್ ಅನ್ನು ಹೋಂಡಾದ ಪ್ರೀಮಿಯಂ ಬೈಕ್‌ಗಳ ಅಂಗವಾದ ಬಿಗ್‌ ವಿಂಗ್ ಬಿಡುಗಡೆ ಮಾಡಿದೆ.

ಈ ವಿಶೇಷ ಮೋಟಾರ್‌ ಸೈಕಲ್‌ ರೆಟ್ರೋ ಫ್ಲೇವರ್‌‌ನ ವಿಶಿಷ್ಟ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಪರ್ಲ್ ಇಗ್ನೇಯಸ್ ಬ್ಲಾಕ್ ಹಾಗೂ ಮ್ಯಾಟ್‌ ಮಾರ್ಷಲ್ ಗ್ರೀನ್ ಬಣ್ಣಗಳಲ್ಲಿ ಈ ಬೈಕ್ ಬರಲಿದೆ. ಬೈಕ್‌ ಮೇಲೆ ಸ್ಪೋರ್ಟ್ ಗ್ರಾಫಿಕ್ಸ್‌ ನೀಡಲಾಗಿದೆ. ಈ ಬೈಕ್‌ಗಳು ಭಾರತದಲ್ಲಿ ಜನವರಿಯಿಂದ ಮಾರಾಟವಾಗಲಿವೆ.

ಹೈನೆಸ್‌ನ ಸಾಮಾನ್ಯ ವರ್ಶನ್‌ಗಳಿಗೆ ಹೋಲಿಸಿದಲ್ಲಿ ಈ ವಿಶೇಷ ವರ್ಶನ್‌ನ ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 348 ಸಿಸಿಯ ಸಿಂಗಲ್ ಸಿಲಿಂಡರ್‌‌, ಏರ್‌-ಕೂಲ್ಡ್‌ ಇಂಜಿನ್ ಹೊಂದಿರುವ ಈ ಬೈಕ್‌ ನಲ್ಲಿ, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಹಾಗೂ ಬ್ಲೂಟೂತ್‌ ಸಂಪರ್ಕಗಳ ಕೊತೆಗೆ ಟಾರ್ಕ್ ನಿಯಂತ್ರಣ ವ್ಯವಸ್ಥೆ, ಡ್ಯುಯಲ್ ಚಾನೆಲ್ ಎಬಿಎಸ್‌ ಸಹ ಇವೆ.

ಭೋಜನ ವಿರಾಮದೊಳಗೆ ಭಾರತಕ್ಕೆ ವಿಜಯಲಕ್ಷ್ಮಿ ಖಚಿತ: ಕೊಹ್ಲಿ ಪಡೆ ಗೆಲುವಿಗೆ ಐದೇ ಮೆಟ್ಟಿಲು

ಇಂಡಿಯಾ ಬೈಕ್ ವೀಕ್‌ನಲ್ಲಿ 2022 ಸಿಬಿ300ಆರ್‌ ಮತ್ತು ಹೈನೆಸ್‌ ಸಿಬಿ 350 ವಾರ್ಷಿಕೋತ್ಸವದ ಎಡಿಷನ್ ಮಾಡೆಲ್‌ಗಳನ್ನು ಪ್ರದರ್ಶಿಸಲಾಗಿದೆ. ವಾರ್ಷಿಕೋತ್ಸವದ ಎಡಿಷನ್‌ನ ಹೈನೆಸ್‌ಗೆ ಹೊಂಬಣ್ಣದ ಬ್ಯಾಡ್ಜ್‌ಗಳು ಹಾಗೂ ಪಿನ್‌ಸ್ಟ್ರಿಪ್‌ಗಳನ್ನು ನೀಡಲಾಗಿದೆ.

ಸಿಬಿ 350 ಸಿಸಿಯ ವಾರ್ಷಿಕೋತ್ಸವದ ಎಡಿಷನ್‌ ಬೈಕ್‌ ಕೊಂಚ ದುಬಾರಿಯಾಗುವ ಅಂದಾಜಿದೆ. ಈ ಮಾಡೆಲ್‌ನ ಸ್ಟಾಂಡರ್ಡ್ ಅವತರಣಿಕೆಯ ಎಕ್ಸ್‌ಶೋರೂಂ ಬೆಲೆ 2.03 ಲಕ್ಷ ರೂಪಾಯಿಗಳಷ್ಟಿದೆ. ಡಿಎಲ್‌ಎಕ್ಸ್ ಪ್ರೋ ವರ್ಶನ್‌ ಬೈಕ್‌ಗಾದರೆ ಇದಕ್ಕಿಂತ 2000 ರೂ. ಹೆಚ್ಚುವರಿಯಾಗಿ ಖರ್ಚಾಗಲಿದೆ.

Honda Hness CB350 Engine From Left

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...