ಮುಖದ ಚರ್ಮವನ್ನು ಸರಿಯಾಗಿ ಆರೈಕೆ ಮಾಡಬೇಕು. ಇಲ್ಲವಾದರೆ ಮುಖದ ತ್ವಚೆಗೆ ಹಾನಿಯಾಗುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ಹಾಗಾಗಿ ಸುಂದರವಾದ ಚರ್ಮವನ್ನು ಹೊಂದಲು ಮನೆಯಲ್ಲಿಯೇ ತಯಾರಿಸಿದ ಟೋನರ್ ಬಳಸಿ ನೋಡಿ.
*ಹಾಲನ್ನು ಬಹಳ ಹಿಂದಿನ ಕಾಲದಿಂದಲೂ ಟೋನರ್ ಆಗಿ ಬಳಸುತ್ತಾರೆ. ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದಲ್ಲಿರುವ ಕಲ್ಮಶಗಳು ಹೊರಹೋಗುತ್ತವೆ. ಚರ್ಮ ಕ್ಲೀನ್ ಆಗುತ್ತದೆ.
*2 ಚಮಚ ವಿನೆಗರ್ ಗೆ ನೀರು ಮತ್ತು ಪುದೀನಾ ಎಲೆಗಳನ್ನು ಬೆರೆಸಿ ಕೆಲವು ದಿನಗಳವರೆಗೆ ಇಟ್ಟು ಬಳಿಕ ಅದನ್ನು ಕಾಟನ್ ಪ್ಯಾಡ್ ನಲ್ಲಿ ಅದ್ದಿ ಮುಖಕ್ಕೆ ಹಚ್ಚಿ. ಇದು ಮುಖದ ಚರ್ಮದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.
*ಗ್ರೀನ್ ಟೀಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿದ್ದು, ಇದು ಕಲ್ಮಶಗಳನ್ನು ಹೊರಹಾಕಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಗ್ರೀನ್ ಟೀ ತಯಾರಿಸಿ ಇದು ತಣಿದ ಮೇಲೆ ಮುಖಕ್ಕೆ ಹಚ್ಚಿ.