alex Certify ಸ್ವಚ್ಛ ಶೌಚಾಲಯ ಹೊಂದಿರುವವರಿಗೆ ಟಿವಿ, ಮೊಬೈಲ್ ʼಕೊಡುಗೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಚ್ಛ ಶೌಚಾಲಯ ಹೊಂದಿರುವವರಿಗೆ ಟಿವಿ, ಮೊಬೈಲ್ ʼಕೊಡುಗೆʼ

ಸ್ವಚ್ಛತೆಯ ಕುರಿತು ಜನಜಾಗೃತಿ ಮೂಡಿಸಲು ದೇಶಾದ್ಯಂತ ಖುದ್ದು ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಗ್ರಾಮ ಪಂಚಾಯಿತಿ ಮಟ್ಟದವರೆಗೂ ಅನೇಕ ಬಗೆಯ ಪ್ಲಾನ್‌ಗಳನ್ನು ಮಾಡಿಕೊಂಡು ಬರಲಾಗುತ್ತಿದೆ.

ಇದೇ ಹಾದಿಯಲ್ಲಿ ಮಧ್ಯ ಪ್ರದೇಶ ಸರ್ಕಾರವು ವಿಶಿಷ್ಟ ಐಡಿಯಾವೊಂದನ್ನು ಅನುಷ್ಠಾನಕ್ಕೆ ತಂದಿದೆ. ರಾಜಧಾನಿ ಭೋಪಾಲ್‌ನ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯನ್ನು ಖಾತ್ರಿ ಪಡಿಸಲು ರಾಜ್ಯ ಸರ್ಕಾರ ಹೀಗೆ ಮಾಡಿದೆ.

ಸಿಸಿ ಟಿವಿ ದೃಶ್ಯಾವಳಿ ನೋಡಿ ಸೋಮಾರಿ ಎಂದ ಬಾಸ್; ರಾಜೀನಾಮೆ ನೀಡಿ ಹೊರ ನಡೆದ ಉದ್ಯೋಗಿ

ಶೌಚಾಲಯಗಳ ಸೂಕ್ತ ಬಳಕೆ ಹಾಗೂ ತ್ಯಾಜ್ಯದ ಸಮರ್ಪಕ ವಿಲೇವಾರಿ ಮಾಡುವ ಜನರಿಗೆ ಟಿವಿ ಹಾಗೂ ಮೊಬೈಲ್ ಫೋನ್‌ಗಳನ್ನು ಬಹುಮಾನದ ರೂಪದಲ್ಲಿ ನೀಡಲಾಗುತ್ತಿದೆ. ತಮ್ಮ ಮನೆಗಳಲ್ಲಿ ಮಾತ್ರವಲ್ಲದೇ ಸುತ್ತಲಿನ ಜಾಗಗಳಲ್ಲೂ ಸ್ವಚ್ಛತೆ ಖಾತ್ರಿ ಪಡಿಸುವ ಮಂದಿಗೆ ಈ ಪುರಸ್ಕಾರ ನೀಡಲಾಗುವುದು.

ಇಲ್ಲಿನ ಬೈರಾಸಿಯಾ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇಲ್ಲಿನ ಡಾಮಿಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಮನೆಗಳ ಶೌಚಾಲಯಗಳ ಪೈಕಿ ಅತ್ಯಂತ ಸ್ವಚ್ಛವಾದವನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿ, ಲಕ್ಕಿ ಡ್ರಾ ಮೂಲಕ ಕುಟುಂಬಗಳನ್ನು ಆರಿಸಿ, ಬಹುಮಾನಗಳ ವಿತರಣೆ ಮಾಡಲಾಗುವುದು.

ಹಾಸ್ಟೆಲ್‌ ನ ಅಡುಗೆ ಕೋಣೆಯಲ್ಲಿ ನಾಗರಹಾವು ಪತ್ತೆ….!

ಮೊದಲನೇ ಬಹುಮಾನವಾಗಿ ಟಿವಿ, ಎರಡನೇ ಬಹುಮಾನದ ರೂಪದಲ್ಲಿ ಮೊಬೈಲ್ ಫೋನ್, ಮೂರನೇ ಬಹುಮಾನವಾಗಿ ಟಾರ್ಚ್ ಹಾಗೂ ನಾಲ್ಕನೇ ಬಹುಮಾನವಾಗಿ ಗಡಿಯಾರಗಳನ್ನು ವಿತರಿಸಲಾಗಿದೆ.

ಗ್ರಾಮ ಪಂಚಾಯಿತಿಯ ಸಮಿತಿಯು ಖುದ್ದು ಮನೆಗಳಿಗೆ ಭೇಟಿ ನೀಡಿ ಶೌಚಾಲಯಗಳ ಸ್ವಚ್ಛತೆಯನ್ನು ಪರಿಶೀಲನೆ ಮಾಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...