alex Certify ಈತ ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ: ಗಿನ್ನೆಸ್​ ದಾಖಲೆಯ ಪುಟ ಸೇರಿದ ‘ಷಾರ್ಟ್​ ಮ್ಯಾನ್’​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈತ ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ: ಗಿನ್ನೆಸ್​ ದಾಖಲೆಯ ಪುಟ ಸೇರಿದ ‘ಷಾರ್ಟ್​ ಮ್ಯಾನ್’​

ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ ಎಂದು ಗಿನ್ನೆಸ್ ವರ್ಲ್ಡ್ ದಾಖಲೆಯ ಪುಟ ಸೇರಿದ್ದಾನೆ ಅಫ್ಶಿನ್ ಎಸ್ಮೇ ಲ್ ಘದರ್ಜಾಡೆ, ಈತ ಉತ್ತರ ಇರಾನಿನ ಬುಕಾನ್ ಕೌಂಟಿಯ ಗ್ರಾಮದವನು.

ಈತನ ಎತ್ತರ ಕೇವಲ 2 ಅಡಿ 1 ಇಂಚು(65.24 ಸೆಂ.ಮೀ.). ಈ ಮೂಲಕ ಪ್ರಪಂಚದಲ್ಲಿ ಜೀವಿತವಿರುವ ಅತ್ಯಂತ ಕುಳ್ಳ ವ್ಯಕ್ತಿ ಎನಿಸಿಕೊಂಡಿದ್ದಾನೆ. ಈತನಿಗೆ ಈಗ 20 ವರ್ಷ ವಯಸ್ಸು. ಈ ಹಿಂದೆ ಕೊಲಂಬಿಯಾ ವಾಸಿ ಎಡ್ವರ್ಡ್ ನಿನೊ ಹೆರ್ನಾಂಡೆಜ್ ಹೆಸರಿನಲ್ಲಿ ಈ ದಾಖಲೆ ಇತ್ತು.

ಅತ್ಯಂತ ಕಡಿಮೆ ಎತ್ತರ ಇರುವ ಕಾರಣ ಮೊಬೈಲ್ ಪೋನ್ ಬಳಸಲು ಸಹ ಅಫ್ಶಿನ್ ಕಷ್ಟ ಪಡುತ್ತಾನಂತೆ. ಇಷ್ಟೇ ಅಲ್ಲದೇ ದೈಹಿಕವಾಗಿ ದುರ್ಬಲ ಇರುವ ಕಾರಣ ಶಾಲೆಗೆ ಕೂಡ ಇವರು ಹೋಗಿಲ್ಲ. ಏನಾದರೂ ಸಾಧಿಸಿ, ದುಡಿಮೆ ಮಾಡಿ ಹೆತ್ತವರಿಗೆ ನೆರವಾಗುವುದೇ ನನ್ನ ಏಕೈಕ ಗುರಿ ಎಂದು ಅಫ್ಶಿನ್ ಹೇಳಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...