ಹೊಸ ಮನೆ ಮನಸ್ಸಿಗೆ ಖುಷಿ ನೀಡುತ್ತದೆ. ಆದ್ರೆ ಗೃಹ ಸಾಲದ ಇಎಂಐ ಹೊರೆ ಪ್ರತಿಯೊಬ್ಬರನ್ನೂ ಹೈರಾಣವಾಗಿಸುತ್ತದೆ. ಪ್ರತಿ ತಿಂಗಳು ಸಂಬಳದ ದೊಡ್ಡ ಪಾಲು ಇಎಂಐಗೆ ಹೋಗ್ತಿದೆ ಎನ್ನುವವರು ಚಿಂತಿಸಬೇಕಾಗಿಲ್ಲ. ಕೆಲವು ಸಮಯದ ಹಿಂದೆ, ಬ್ಯಾಂಕುಗಳು ಗೃಹ ಸಾಲವನ್ನು ಶೇಕಡಾ 8-9ರ ಬಡ್ಡಿದರದಲ್ಲಿ ನೀಡುತ್ತಿದ್ದವು. ಆದರೆ ಈಗ ಹೆಚ್ಚಿನ ಬ್ಯಾಂಕುಗಳ ಗೃಹ ಸಾಲದ ಬಡ್ಡಿಯನ್ನು ಶೇಕಡಾ 7ಕ್ಕೆ ಇಳಿಸಿವೆ. ಅನೇಕ ಬ್ಯಾಂಕುಗಳು ಗೃಹ ಸಾಲಗಳ ಮೇಲೆ ಅನೇಕ ಕೊಡುಗೆಗಳನ್ನು ಮತ್ತು ರಿಯಾಯಿತಿಗಳನ್ನು ನೀಡುತ್ತಿವೆ. ಹಳೆಯ ಗೃಹ ಸಾಲವನ್ನು ಬೇರೆ ಬ್ಯಾಂಕಿಗೆ ವರ್ಗಾಯಿಸುವ ಮೂಲಕ ಇಎಂಐ ಹೊರೆ ಕಡಿಮೆ ಮಾಡಬಹುದು. ಆದ್ರೆ ಇದ್ರ ಬಗ್ಗೆ ಮೊದಲೇ ಪ್ಲಾನ್ ಮಾಡಿರಬೇಕು.
ನಾಲ್ಕು ವರ್ಷಗಳ ಹಿಂದೆ ಅಂದರೆ 2017 ರಲ್ಲಿ ಗೃಹ ಸಾಲವನ್ನು ತೆಗೆದುಕೊಂಡಿದ್ದೀರಿ ಎಂದುಕೊಳ್ಳೋಣ. ಆಗ ಶೇಕಡಾ 9.25ರ ಬಡ್ಡಿ ದರದಲ್ಲಿ ಸಾಲ ಸಿಕ್ಕಿತ್ತು. ಈಗ ಗೃಹ ಸಾಲವನ್ನು ಹೊಸ ಬ್ಯಾಂಕಿಗೆ ವರ್ಗಾಯಿಸಿ, ಶೇಕಡಾ 7 ರ ಬಡ್ಡಿ ದರ ಪಾವತಿ ಮಾಡಿದ್ರೆ ನಿಮ್ಮ ಇಎಂಐ ಎಷ್ಟು ಕಡಿಮೆಯಾಗುತ್ತದೆ ಗೊತ್ತಾ?
ಎಲೆಕ್ಟ್ರಿಕ್ ಸ್ಕೂಟರ್ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಖುಷಿ ಸುದ್ದಿ
2017ರಲ್ಲಿ 30 ಲಕ್ಷ ರೂಪಾಯಿ ಸಾಲವನ್ನು ನೀವು ಶೇಕಡಾ 9.25ರ ಬಡ್ಡಿ ದರದಲ್ಲಿ 20 ವರ್ಷದ ಅವಧಿಗೆ ಪಡೆದಿದ್ದರೆ ನೀವು ಪ್ರತಿ ತಿಂಗಳು 27,476 ರೂಪಾಯಿ ಇಎಂಐ ಪಾವತಿಸಬೇಕಾಗುತ್ತದೆ. ಈಗ ನೀವು ಬೇರೆ ಬ್ಯಾಂಕ್ ಗೆ ಇದನ್ನು ವರ್ಗಾವಣೆ ಮಾಡಿದ್ರೆ ಆಗ 22,400 ರೂಪಾಯಿ ಇಎಂಐ ಪಾವತಿ ಮಾಡಬೇಕಾಗುತ್ತದೆ. ಅಂದ್ರೆ ನಿಮಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಇಎಂಐ ಕಡಿಮೆ ಬರುತ್ತದೆ.
ಮೊದಲು ಯಾವ ಬ್ಯಾಂಕ್ ನಲ್ಲಿ ಗೃಹ ಸಾಲದ ಬಡ್ಡಿ ಎಷ್ಟಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಮೊದಲು ನೀವು ಸಾಲ ಪಡೆದ ಬ್ಯಾಂಕ್ ಗೆ ಹೋಗಿ, ಬಡ್ಡಿ ಕಡಿಮೆ ಮಾಡುವಂತೆ ವಿನಂತಿಸಿಕೊಳ್ಳಿ. ಬ್ಯಾಂಕ್ ನಿಮ್ಮ ಸಾಲದ ಬಡ್ಡಿ ಕಡಿಮೆ ಮಾಡಿದಲ್ಲಿ ಸಮಸ್ಯೆಯಿಲ್ಲ. ಒಂದು ವೇಳೆ ಬಡ್ಡಿ ಕಡಿಮೆ ಮಾಡದೆ ಹೋದಲ್ಲಿ ಕಡಿಮೆ ಬಡ್ಡಿಯಿರುವ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸಿ. ಅಲ್ಲಿ ನಿಮಗೆ ಸಾಲದ ಮಂಜೂರಿ ಪತ್ರ ಸಿಕ್ಕರೆ, ಮೊದಲು ಸಾಲ ಪಡೆದ ಬ್ಯಾಂಕ್ ಗೆ ಹೋಗಿ, ಸಾಲದ ವಿವರ ಹಾಗೂ ಅಸಲಿ ದಾಖಲೆ ತೆಗೆದಕೊಂಡು ಬರಬೇಕು. ಇದನ್ನು ಹೊಸ ಬ್ಯಾಂಕ್ ಗೆ ನೀಡಬೇಕು. ಎಲ್ಲ ದಾಖಲೆ ಪರಿಶೀಲಿಸಿ, ಸಾಲ ವರ್ಗಾವಣೆಯಾಗಲು ಕೆಲ ಸಮಯ ಬೇಕಾಗುತ್ತದೆ. ಇದಕ್ಕೆ ನೀವು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇನ್ನೂ 15-18 ವರ್ಷದ ಸಾಲದ ಅವಧಿಯಿದ್ದಲ್ಲಿ ಮಾತ್ರ ಸಾಲ ವರ್ಗಾವಣೆ ಮಾಡಿ. ಹಾಗೆ ದೊಡ್ಡ ಮೊತ್ತದ ಸಾಲವಿದ್ದರೆ ಮಾತ್ರ ವರ್ಗಾವಣೆಗೆ ಕೈ ಹಾಕಿ.