alex Certify BIG NEWS: ಬೆಂಗಳೂರಿನಲ್ಲಿ ರದ್ದಾಗಲಿದೆ ಹೋಂ ಐಸೋಲೇಷನ್ – ಪರ್ಯಾಯ ಮಾರ್ಗ ಹುಡುಕಿದ ಬಿಬಿಎಂಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಿನಲ್ಲಿ ರದ್ದಾಗಲಿದೆ ಹೋಂ ಐಸೋಲೇಷನ್ – ಪರ್ಯಾಯ ಮಾರ್ಗ ಹುಡುಕಿದ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕಿನ ಅಲೆಯನ್ನ ಕಡಿಮೆ ಮಾಡಲು ಬಿಬಿಎಂಪಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ತಿದೆ. ರಾಜ್ಯದಲ್ಲಿ ಬೆಡ್​ ಕೊರತೆ ಉಂಟಾದ ಹಿನ್ನೆಲೆ ಲಕ್ಷಣ ರಹಿತ ಹಾಗೂ ಸೌಮ್ಯ ಲಕ್ಷಣ ಉಳ್ಳವರನ್ನ ಹೋಂ ಐಸೋಲೇಷನ್​ನಲ್ಲಿ ಇರುವಂತೆ ಹೇಳಲಾಗುತ್ತಿತ್ತು.

ಆದರೆ ಹೋಂ ಐಸೋಲೇಷನ್​​ನಿಂದ ಸೋಂಕು ಹೆಚ್ಚಾಗುತ್ತಿರೋದು ಗಮನಕ್ಕೆ ಬಂದ ಹಿನ್ನೆಲೆ ಬಿಬಿಎಂಪಿ ಪಯಾರ್ಯ ಮಾರ್ಗಕ್ಕೆ ಚಿಂತನೆ ನಡೆಸಿದೆ.

ಸೌಮ್ಯ ಹಾಗೂ ಲಕ್ಷಣ ರಹಿತ ಕೊರೊನಾ ಸೋಂಕು ಹೊಂದಿರುವವರನ್ನ ಹೋಂ ಐಸೋಲೇಷನ್​ ಬದಲಾಗಿ ಟ್ರಯಾಜ್ ಸೆಂಟರ್​ಗೆ ಶಿಫ್ಟ್​ ಮಾಡಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಕೈಗೆ ಸೀಲ್​ ಹಾಕುವ ಮೂಲಕ ಅವರಿಗೆ ಮನೆಯಲ್ಲೇ ಇರುವಂತೆ ಹೇಳಲಾಗುತ್ತೆ.

ಇಲ್ಲಿಯವರೆಗೆ ಟ್ರಯಾಜ್​ನ್ನು ದೂರವಾಣಿ ಕರೆ ಮೂಲಕ ಮಾಡಲಾಗುತ್ತಿತ್ತು. ಆದರೆ ಈಗ ಪ್ರತಿ ವಾರ್ಡ್​ಗೂ ಟ್ರಯಾಜ್​ ಸೆಂಟರ್​ ತೆರೆಯಲಾಗುತ್ತಿದೆ. ಇಲ್ಲಿ ಸೋಂಕಿತರ ಸಂಪೂರ್ಣ ತಪಾಸಣೆ ನಡೆಸಿ ಯಾವ ರೀತಿಯ ಚಿಕಿತ್ಸೆ ನೀಡಬೇಕು ಅನ್ನೋದನ್ನ ನಿರ್ಧಾರ ಮಾಡಲಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...