ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕಿನ ಅಲೆಯನ್ನ ಕಡಿಮೆ ಮಾಡಲು ಬಿಬಿಎಂಪಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ತಿದೆ. ರಾಜ್ಯದಲ್ಲಿ ಬೆಡ್ ಕೊರತೆ ಉಂಟಾದ ಹಿನ್ನೆಲೆ ಲಕ್ಷಣ ರಹಿತ ಹಾಗೂ ಸೌಮ್ಯ ಲಕ್ಷಣ ಉಳ್ಳವರನ್ನ ಹೋಂ ಐಸೋಲೇಷನ್ನಲ್ಲಿ ಇರುವಂತೆ ಹೇಳಲಾಗುತ್ತಿತ್ತು.
ಆದರೆ ಹೋಂ ಐಸೋಲೇಷನ್ನಿಂದ ಸೋಂಕು ಹೆಚ್ಚಾಗುತ್ತಿರೋದು ಗಮನಕ್ಕೆ ಬಂದ ಹಿನ್ನೆಲೆ ಬಿಬಿಎಂಪಿ ಪಯಾರ್ಯ ಮಾರ್ಗಕ್ಕೆ ಚಿಂತನೆ ನಡೆಸಿದೆ.
ಸೌಮ್ಯ ಹಾಗೂ ಲಕ್ಷಣ ರಹಿತ ಕೊರೊನಾ ಸೋಂಕು ಹೊಂದಿರುವವರನ್ನ ಹೋಂ ಐಸೋಲೇಷನ್ ಬದಲಾಗಿ ಟ್ರಯಾಜ್ ಸೆಂಟರ್ಗೆ ಶಿಫ್ಟ್ ಮಾಡಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಕೈಗೆ ಸೀಲ್ ಹಾಕುವ ಮೂಲಕ ಅವರಿಗೆ ಮನೆಯಲ್ಲೇ ಇರುವಂತೆ ಹೇಳಲಾಗುತ್ತೆ.
ಇಲ್ಲಿಯವರೆಗೆ ಟ್ರಯಾಜ್ನ್ನು ದೂರವಾಣಿ ಕರೆ ಮೂಲಕ ಮಾಡಲಾಗುತ್ತಿತ್ತು. ಆದರೆ ಈಗ ಪ್ರತಿ ವಾರ್ಡ್ಗೂ ಟ್ರಯಾಜ್ ಸೆಂಟರ್ ತೆರೆಯಲಾಗುತ್ತಿದೆ. ಇಲ್ಲಿ ಸೋಂಕಿತರ ಸಂಪೂರ್ಣ ತಪಾಸಣೆ ನಡೆಸಿ ಯಾವ ರೀತಿಯ ಚಿಕಿತ್ಸೆ ನೀಡಬೇಕು ಅನ್ನೋದನ್ನ ನಿರ್ಧಾರ ಮಾಡಲಾಗುತ್ತೆ.