alex Certify ಹಿಟ್ಲರ್​ ವಾಚ್ ಬರೋಬ್ಬರಿ​ 8.7 ಕೋಟಿ ರೂಪಾಯಿಗಳಿಗೆ ಹರಾಜು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಟ್ಲರ್​ ವಾಚ್ ಬರೋಬ್ಬರಿ​ 8.7 ಕೋಟಿ ರೂಪಾಯಿಗಳಿಗೆ ಹರಾಜು…!

ಸರ್ವಾಧಿಕಾರಿ ಅಡಾಲ್ಫ್​ ಹಿಟ್ಲರ್​ಗೆ ಸೇರಿದ್ದೆಂದು ಹೇಳಲಾದ ಕೈಗಡಿಯಾರವನ್ನು ಮೇರಿಲ್ಯಾಂಡ್​ನ ಅಲೆಕ್ಸಾಂಡರ್​ ಐತಿಹಾಸಿಕ ಹರಾಜಿನಲ್ಲಿ ಅನಾಮಧೇಯ ಖರೀದಿದಾರನಿಗೆ ಸುಮಾರು 8.7 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ.

ಈ ಹರಾಜು ಬಹಳಷ್ಟು ಗಮನ ಸೆಳೆದಿದೆ. ವರದಿಯ ಪ್ರಕಾರ, ಯಹೂದಿ ಸಮುದಾಯದ ಸದಸ್ಯರ ಆತಂಕದ ಹೊರತಾಗಿಯೂ ವಾಚ್​ ಅನ್ನು ಯುಎಸ್​ ಖರೀದಿದಾರರಿಗೆ ಮಾರಾಟ ಮಾಡಲಾಗಿದೆ.

ವಾಚ್​ ಅನ್ನು ಜರ್ಮನ್​ ವಾಚ್​ ಫರ್ಮ್​ ಹ್ಯೂಬರ್​ ತಯಾರಿಸಿದೆ, ಅದರಲ್ಲಿ ಸ್ವಸ್ತಿಕ್​ ಮತ್ತು ಎಎಚ್​ ಎಂದು ಕೆತ್ತಲಾಗಿದೆ. ಹರಾಜು ಸಂಸ್ಥೆಯ ಪ್ರಕಾರ, ಹಿಟ್ಲರ್​ನ 44ನೇ ಜನ್ಮದಿನದಂದು ವಾಚ್​ ಅನ್ನು ನೀಡಲಾಗಿತ್ತು.

ಆಕ್ಷನ್​ ನಡೆಸುವ ಸಂಸ್ಥೆ ಐತಿಹಾಸಿಕ ಆಟೋಗ್ರಾಫ್​ಗಳು, ದಾಖಲೆಗಳು ಮತ್ತು ಛಾಯಾಚಿತ್ರಗಳು, ಎಲ್ಲಾ ಮಿಲಿಟರಿ, ಪ್ರಮುಖ ಅವಶೇಷಗಳ ವ್ಯವಹಾರ ನಡೆಸುತ್ತದೆ.

ನಾಜಿ ಯುಗದ ಈ ಸ್ಮರಣಿಕೆ ಹಿಟ್ಲರ್​ಗೆ ಸೇರಿದ್ದು ಎಂಬುದು ಗ್ಯಾರಂಟಿ ಇಲ್ಲ. ಹರಾಜು ಸಂಸ್ಥೆಯಿಂದ ಒದಗಿಸಲಾದ ದಾಖಲೆಗಳು ಹಿಟ್ಲರ್​ ನಿಜವಾಗಿಯೂ ವಾಚ್​ ಧರಿಸಿದ್ದಕ್ಕೆ ಪುರಾವೆ ನೀಡಲು ಸಾಧ್ಯವಿಲ್ಲ. ಆದರೆ ತಜ್ಞರ ಮೌಲ್ಯಮಾಪನವು ಅದು ಹಿಟ್ಲರ್​ಗೆ ಸೇರಿದ್ದಾಗಿದೆೆ ಎಂದು ತೀರ್ಮಾನಿಸಿದೆ.

ಗಡಿಯಾರವು ಮಿಗ್ನೋಟ್​ ಕುಟುಂಬದ ವಿಶೇಷ ಸ್ವಾಧೀನದಲ್ಲಿ ಉಳಿದಿತ್ತು ಮತ್ತು ಹಿಂದೆಂದೂ ಮಾರಾಟಕ್ಕೆ ನೀಡಿರಲಿಲ್ಲ. ಈ ವಾಚ್​ ಬಗ್ಗೆ ವಿಶ್ವದ ಅತ್ಯಂತ ಅನುಭವಿ ಗಡಿಯಾರ ತಯಾರಕರು ಮತ್ತು ಮಿಲಿಟರಿ ಇತಿಹಾಸಕಾರರು ಸಂಶೋಧಿಸಿದ್ದಾರೆ, ಅವರೆಲ್ಲರೂ ಇದು ಅಧಿಕೃತ ಮತ್ತು ನಿಜವಾಗಿಯೂ ಅಡಾಲ್ಫ್​ ಹಿಟ್ಲರ್​ಗೆ ಸೇರಿದೆ ಎಂದು ತೀರ್ಮಾನಿಸಿದ್ದಾರೆ.

ಅಚ್ಚರಿ ಎಂದರೆ ಹಿಟ್ಲರ್​ಗೆ ಸಂಬಂಧಿಸಿದ ಯಾವುದೂ ಸುಲಭವಾಗಿ ಇತ್ಯರ್ಥವಾಗುವುದಿಲ್ಲ. ಅಂತೆಯೇ, ಈ ಹರಾಜು ಯಹೂದಿ ಸಮುದಾಯದ ಆತಂಕಕ್ಕೆ ಕಾರಣವಾಯಿತು. ಈ ಮಾರಾಟವನ್ನು “ಅಸಹ್ಯಕರ” ಎಂದು ವಿವರಿಸಿ ಬಹಿರಂಗ ಪತ್ರ ಬರೆದಿದ್ದು, 34 ಯಹೂದಿ ನಾಯಕರು ಸಹಿ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...