ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ಗೆ ಸೇರಿದ್ದೆಂದು ಹೇಳಲಾದ ಕೈಗಡಿಯಾರವನ್ನು ಮೇರಿಲ್ಯಾಂಡ್ನ ಅಲೆಕ್ಸಾಂಡರ್ ಐತಿಹಾಸಿಕ ಹರಾಜಿನಲ್ಲಿ ಅನಾಮಧೇಯ ಖರೀದಿದಾರನಿಗೆ ಸುಮಾರು 8.7 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ.
ಈ ಹರಾಜು ಬಹಳಷ್ಟು ಗಮನ ಸೆಳೆದಿದೆ. ವರದಿಯ ಪ್ರಕಾರ, ಯಹೂದಿ ಸಮುದಾಯದ ಸದಸ್ಯರ ಆತಂಕದ ಹೊರತಾಗಿಯೂ ವಾಚ್ ಅನ್ನು ಯುಎಸ್ ಖರೀದಿದಾರರಿಗೆ ಮಾರಾಟ ಮಾಡಲಾಗಿದೆ.
ವಾಚ್ ಅನ್ನು ಜರ್ಮನ್ ವಾಚ್ ಫರ್ಮ್ ಹ್ಯೂಬರ್ ತಯಾರಿಸಿದೆ, ಅದರಲ್ಲಿ ಸ್ವಸ್ತಿಕ್ ಮತ್ತು ಎಎಚ್ ಎಂದು ಕೆತ್ತಲಾಗಿದೆ. ಹರಾಜು ಸಂಸ್ಥೆಯ ಪ್ರಕಾರ, ಹಿಟ್ಲರ್ನ 44ನೇ ಜನ್ಮದಿನದಂದು ವಾಚ್ ಅನ್ನು ನೀಡಲಾಗಿತ್ತು.
ಆಕ್ಷನ್ ನಡೆಸುವ ಸಂಸ್ಥೆ ಐತಿಹಾಸಿಕ ಆಟೋಗ್ರಾಫ್ಗಳು, ದಾಖಲೆಗಳು ಮತ್ತು ಛಾಯಾಚಿತ್ರಗಳು, ಎಲ್ಲಾ ಮಿಲಿಟರಿ, ಪ್ರಮುಖ ಅವಶೇಷಗಳ ವ್ಯವಹಾರ ನಡೆಸುತ್ತದೆ.
ನಾಜಿ ಯುಗದ ಈ ಸ್ಮರಣಿಕೆ ಹಿಟ್ಲರ್ಗೆ ಸೇರಿದ್ದು ಎಂಬುದು ಗ್ಯಾರಂಟಿ ಇಲ್ಲ. ಹರಾಜು ಸಂಸ್ಥೆಯಿಂದ ಒದಗಿಸಲಾದ ದಾಖಲೆಗಳು ಹಿಟ್ಲರ್ ನಿಜವಾಗಿಯೂ ವಾಚ್ ಧರಿಸಿದ್ದಕ್ಕೆ ಪುರಾವೆ ನೀಡಲು ಸಾಧ್ಯವಿಲ್ಲ. ಆದರೆ ತಜ್ಞರ ಮೌಲ್ಯಮಾಪನವು ಅದು ಹಿಟ್ಲರ್ಗೆ ಸೇರಿದ್ದಾಗಿದೆೆ ಎಂದು ತೀರ್ಮಾನಿಸಿದೆ.
ಗಡಿಯಾರವು ಮಿಗ್ನೋಟ್ ಕುಟುಂಬದ ವಿಶೇಷ ಸ್ವಾಧೀನದಲ್ಲಿ ಉಳಿದಿತ್ತು ಮತ್ತು ಹಿಂದೆಂದೂ ಮಾರಾಟಕ್ಕೆ ನೀಡಿರಲಿಲ್ಲ. ಈ ವಾಚ್ ಬಗ್ಗೆ ವಿಶ್ವದ ಅತ್ಯಂತ ಅನುಭವಿ ಗಡಿಯಾರ ತಯಾರಕರು ಮತ್ತು ಮಿಲಿಟರಿ ಇತಿಹಾಸಕಾರರು ಸಂಶೋಧಿಸಿದ್ದಾರೆ, ಅವರೆಲ್ಲರೂ ಇದು ಅಧಿಕೃತ ಮತ್ತು ನಿಜವಾಗಿಯೂ ಅಡಾಲ್ಫ್ ಹಿಟ್ಲರ್ಗೆ ಸೇರಿದೆ ಎಂದು ತೀರ್ಮಾನಿಸಿದ್ದಾರೆ.
ಅಚ್ಚರಿ ಎಂದರೆ ಹಿಟ್ಲರ್ಗೆ ಸಂಬಂಧಿಸಿದ ಯಾವುದೂ ಸುಲಭವಾಗಿ ಇತ್ಯರ್ಥವಾಗುವುದಿಲ್ಲ. ಅಂತೆಯೇ, ಈ ಹರಾಜು ಯಹೂದಿ ಸಮುದಾಯದ ಆತಂಕಕ್ಕೆ ಕಾರಣವಾಯಿತು. ಈ ಮಾರಾಟವನ್ನು “ಅಸಹ್ಯಕರ” ಎಂದು ವಿವರಿಸಿ ಬಹಿರಂಗ ಪತ್ರ ಬರೆದಿದ್ದು, 34 ಯಹೂದಿ ನಾಯಕರು ಸಹಿ ಹಾಕಿದ್ದಾರೆ.