ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹರಾಜಾದ ಐತಿಹಾಸಿಕ ವಸಾಹತುಶಾಹಿ ಯುಗದ ಪಿಸ್ತೂಲ್ ಮತ್ತೆ ಭಾರತಕ್ಕೆ ಮರಳಿದೆ.
1850 ರ ದಶಕದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿ ಬಳಸಿದ್ದ ಪುರಾತನ ಪಿಸ್ತೂಲ್ ಅನ್ನು ಯುಕೆನಲ್ಲಿ ಹರಾಜಿಗಿಡಲಾಗಿತ್ತು. ಗಾರ್ಡನ್ ಪಿಸ್ತೂಲ್ ಎಂದು ಕರೆಯಲ್ಪಡುವ ಈ ಬಂದೂಕನ್ನು 17ನೇ ಪೂನಾ ಹಾರ್ಸ್ ಆರ್ಮರ್ಡ್ ರೆಜಿಮೆಂಟ್ ಬಳಸಿದೆ. ಪಿಸ್ತೂಲನ್ನು ನಿವೃತ್ತ ಸೇನಾ ಅಧಿಕಾರಿ ಕ್ಯಾಪ್ಟನ್ ಕಾಲಿನ್ ಮ್ಯಾಕ್‌ಗ್ರೆಗರ್ ಅವರು ಖರೀದಿಸಿದ್ದಾರೆ.
ಉತ್ತಮ ಆಧುನಿಕ ಮತ್ತು ಪುರಾತನ ಶಸ್ತ್ರಾಸ್ತ್ರಗಳ ಮಾರಾಟದಲ್ಲಿ ಪರಿಣತಿ ಹೊಂದಿರುವ ಹೋಲ್ಟ್ಸ್ ಎಂಬ ಬ್ರಿಟಿಷ್ ಹರಾಜಿನಲ್ಲಿ, ಕ್ಯಾಪ್ಟನ್ ಕಾಲಿನ್ ಪುರಾತನ ಗನ್ ಅನ್ನು ಕ್ಲೈಮ್ ಮಾಡಿದ್ದಾರೆ ಎಂದು ವರದಿಯಾಗಿದೆ. ಪಿಸ್ತೂಲ್ ಬೆಲೆ 1,200 ಜಿಬಿ ಪೌಂಡ್ ಅಂದರೆ ಸುಮಾರು 1,19,474 ರೂ.ನಷ್ಟಿದೆ.
ನಯಾಪೈಸೆ ಖರ್ಚು ಮಾಡದೆ 120 ಬಸ್‌ಗಳಲ್ಲಿ 3,540 ಕಿ.ಮೀ. ಪ್ರಯಾಣಿಸಿದ್ದಾರೆ ಈ ವೃದ್ಧೆ..!
ಪಿಸ್ತೂಲ್ ಈಗ ರೆಜಿಮೆಂಟ್‌ನೊಂದಿಗೆ ಭಾರತಕ್ಕೆ ಮರಳಿದೆ. ಮತ್ತು ಅದೇ ರೆಜಿಮೆಂಟ್‌ನಿಂದ ಬಂದಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್. ಸಿಧು ಅವರಿಗೆ ನವೆಂಬರ್ 16 ರಂದು ದೆಹಲಿಯ ಬ್ರಿಟಿಷ್ ಹೈಕಮಿಷನ್‌ನ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಗೇವಿನ್ ಥಾಂಪ್ಸನ್ ಹಸ್ತಾಂತರಿಸಿದ್ದಾರೆ. ಇದು ಭಾರತ ಮತ್ತು ಯುಕೆ ನಡುವಿನ ಸಮೃದ್ಧ ಸಂಬಂಧದ ಸಂಕೇತವಾಗಿದೆ ಎಂದು ಬ್ರಿಗೇಡಿಯರ್ ಗೇವಿನ್ ಹೇಳಿದ್ದಾರೆ.
1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ನಡೆದ ಪ್ರಮುಖ ಯುದ್ಧಗಳಲ್ಲಿ ಒಂದಾದ, ಬಸಂತರ್ ಕದನದ 50ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಪುರಾತನ ಆಯುಧವನ್ನು ಪ್ರದರ್ಶಿಸಲು ರೆಜಿಮೆಂಟ್ ಯೋಜಿಸಿದೆ.