alex Certify ನೂತನ ಸಂಸತ್ ಭವನದಲ್ಲಿ ರಾಜದಂಡ ‘ಸೆಂಗೋಲ್’ ಸ್ಥಾಪನೆ; ಇದಕ್ಕಿದೆ ಐತಿಹಾಸಿಕ ಹಿನ್ನೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೂತನ ಸಂಸತ್ ಭವನದಲ್ಲಿ ರಾಜದಂಡ ‘ಸೆಂಗೋಲ್’ ಸ್ಥಾಪನೆ; ಇದಕ್ಕಿದೆ ಐತಿಹಾಸಿಕ ಹಿನ್ನೆಲೆ

ಪ್ರಧಾನಿ ನರೇಂದ್ರ ಮೋದಿ ಮೇ 28 ರ ಭಾನುವಾರ ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭದಲ್ಲಿ ಸ್ಪೀಕರ್ ಸ್ಥಾನದ ಬಳಿ ಐತಿಹಾಸಿಕ ಚಿನ್ನದ ರಾಜದಂಡವನ್ನು ಸ್ಥಾಪಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಹೇಳಿದ್ದಾರೆ.

ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ಹಸ್ತಾಂತರವನ್ನು ಗುರುತಿಸಲು ಈ ರಾಜದಂಡ ( ಸೆಂಗೋಲ್ ) ವನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಹಸ್ತಾಂತರಿಸಲಾಯಿತು. ಈ ರಾಜದಂಡವನ್ನು “ಸೆಂಗೊಲ್” ಎಂದು ಕರೆಯಲಾಗುತ್ತದೆ. ಇದು ತಮಿಳು ಪದ “ಸೆಮ್ಮೈ” ನಿಂದ ಬಂದಿದೆ. ಅಂದರೆ “ಸದಾಚಾರ” ಎಂದು ಅರ್ಥ ಎಂದು ಗೃಹ ಸಚಿವರು ಹೇಳಿದರು.

ಬ್ರಿಟಿಷ್ ಇಂಡಿಯಾದ ಕೊನೆಯ ವೈಸ್‌ ರಾಯ್  ಲಾರ್ಡ್ ಮೌಂಟ್ ಬ್ಯಾಟನ್ ಅವರು ಪ್ರಧಾನಿ ನೆಹರುರವರಿಗೆ ಕೇಳಿದ ಸರಳ ಪ್ರಶ್ನೆಯೊಂದಿಗೆ ಪ್ರಾರಂಭವಾದ ಘಟನೆಗಳ ಸರಣಿಯ ನಂತರ ಸೆಂಗೋಲ್ ಅಸ್ತಿತ್ವಕ್ಕೆ ಬಂದಿತು.

ಇತಿಹಾಸ ತಜ್ಞರು ಮತ್ತು ಐತಿಹಾಸಿಕ ಘಟನಾ ವರದಿಗಳ ಪ್ರಕಾರ ಲಾರ್ಡ್ ಮೌಂಟ್‌ಬ್ಯಾಟನ್ ಅವರು ಭಾರತ ಸ್ವಾತಂತ್ರ್ಯಾನಂತರ ಶೀಘ್ರದಲ್ಲೇ ಪ್ರಧಾನಿಯಾಗಲಿದ್ದ ನೆಹರೂರವರನ್ನು ಅಧಿಕಾರದ ಹಸ್ತಾಂತರವನ್ನು ಹೇಗೆ ಗುರುತಿಸುವುದೆಂದು ಕೇಳಿದರು. ‌

ಈ ಬಗ್ಗೆ ಸಲಹೆ ನೀಡಲು ಪ್ರಧಾನಿ ನೆಹರು ದೇಶದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಅವರನ್ನ ಕೋರಿದರು.

ರಾಜಾಜಿ ಎಂದು ಕರೆಯಲ್ಪಡುವ ರಾಜಗೋಪಾಲಾಚಾರಿ ಅವರು ಪ್ರಧಾನಿ ನೆಹರೂ ಅವರಿಗೆ ಅಧಿಕಾರಕ್ಕೆ ಬಂದಾಗ ಹೊಸ ರಾಜನಿಗೆ ಪ್ರಧಾನ ಅರ್ಚಕರು ರಾಜದಂಡವನ್ನು ಹಸ್ತಾಂತರಿಸುವ ತಮಿಳು ಸಂಪ್ರದಾಯದ ಬಗ್ಗೆ ತಿಳಿಸಿದರು.

ಚೋಳರ ಆಳ್ವಿಕೆಯಲ್ಲಿ ಈ ಸಂಪ್ರದಾಯವನ್ನು ಅನುಸರಿಸಲಾಯಿತು ಭಾರತದ ಸ್ವಾತಂತ್ರ್ಯವನ್ನು ಗುರುತಿಸಲು ಇದೇ ಮಾರ್ಗ ಅನುಸರಿಸಬಹುದೆಂದು ರಾಜಾಜಿ ಹೇಳಿದರು. ನಂತರ ಬ್ರಿಟಿಷರಿಂದ ಅಧಿಕಾರ ಹಸ್ತಾಂತರಕ್ಕೆ ರಾಜದಂಡವನ್ನು ವ್ಯವಸ್ಥೆ ಮಾಡುವ ಜವಾಬ್ದಾರಿ ರಾಜಾಜಿಯವರ ಮೇಲೆ ಬಿದ್ದಿತು.

ದಿ ಮೇಕಿಂಗ್ ಆಫ್ ಸೆಂಗೋಲ್

ಭಾರತದ ಸ್ವಾತಂತ್ರ್ಯವನ್ನು ಗುರುತಿಸುವ ರಾಜದಂಡವನ್ನು ಒದಗಿಸುವ ಕೆಲಸವನ್ನು ಎದುರಿಸಿದ ರಾಜಾಜಿ ಇಂದಿನ ತಮಿಳುನಾಡಿನ ಪ್ರಮುಖ ಮಠವಾದ ತಿರುವಾಡುತುರೈ ಅಥೀನಂ ಅವರನ್ನು ಸಂಪರ್ಕಿಸಿದರು. ಅಂದಿನ ಮಠದ ಶ್ರೀಗಳು ಜವಾಬ್ದಾರಿಯನ್ನು ಸ್ವೀಕರಿಸಿದರು. ಆಗಿನ ಮದ್ರಾಸಿನಲ್ಲಿ ಆಭರಣ ವ್ಯಾಪಾರಿಯಾಗಿದ್ದ ವುಮ್ಮಿಡಿ ಬಂಗಾರು ಚೆಟ್ಟಿ ಅವರು ಸೆಂಗೋಲನ್ನು ತಯಾರಿಸಿದರು. ಇದು ಐದು ಅಡಿ ಉದ್ದ ಮತ್ತು ನ್ಯಾಯವನ್ನು ಸಂಕೇತಿಸುವ ‘ನಂದಿ’ ಯನ್ನು ಹೊಂದಿದೆ.

ಸೆಂಗೋಲ್ ಹಸ್ತಾಂತರ

ವರದಿಗಳ ಪ್ರಕಾರ ಮಠದ ಹಿರಿಯ ಅರ್ಚಕರು ಮೊದಲು ರಾಜದಂಡವನ್ನು ಮೌಂಟ್‌ಬ್ಯಾಟನ್‌ಗೆ ಹಸ್ತಾಂತರಿಸಿ ನಂತರ ಅದನ್ನು ಹಿಂದಕ್ಕೆ ತೆಗೆದುಕೊಂಡರು. ನಂತರ ಅದಕ್ಕೆ ಗಂಗಾಜಲವನ್ನು ಸಿಂಪಡಿಸಿ ಮೆರವಣಿಗೆಯಲ್ಲಿ ಪ್ರಧಾನ ಮಂತ್ರಿ ನೆಹರೂ ಬಳಿಗೆ ಕೊಂಡೊಯ್ದು ಅವರಿಗೆ ಹಸ್ತಾಂತರಿಸಲಾಯಿತು. ಭಾರತವು ಸ್ವಾತಂತ್ರ್ಯವನ್ನು ಗಳಿಸಿದ ಏಪ್ರಿಲ್ 14ರ ಮಧ್ಯರಾತ್ರಿಯ 15 ನಿಮಿಷಗಳ ಮೊದಲು ಹಸ್ತಾಂತರಿಸಲಾಯಿತು. ಪ್ರಧಾನಿ ನೆಹರೂ ರಾಜದಂಡವನ್ನು ಸ್ವೀಕರಿಸುತ್ತಿದ್ದಂತೆ ವಿಶೇಷ ಗೀತೆಯನ್ನು ರಚಿಸಲಾಯಿತು.

ಹೊಸ ಸಂಸತ್ತಿನಲ್ಲಿ ಸೆಂಗೋಲ್ ಸ್ಥಾನ

‘ಸೆಂಗೊಲ್’ನ ಇತಿಹಾಸ ಮತ್ತು ಮಹತ್ವವು ಅನೇಕರಿಗೆ ತಿಳಿದಿಲ್ಲ ಎಂದು ಗೃಹ ಸಚಿವರು ಹೇಳಿದರು. ಹೊಸ ಸಂಸತ್ತಿನಲ್ಲಿ ಇದರ ಸ್ಥಾಪನೆಯು ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ನಮ್ಮ ಆಧುನಿಕತೆಯೊಂದಿಗೆ ಜೋಡಿಸುವ ಪ್ರಯತ್ನವಾಗಿದೆ. ಹೊಸ ಸಂಸತ್ತಿನಲ್ಲಿ ಸೆಂಗೋಲ್ ಅಳವಡಿಸುವ ಯೋಜನೆಯು ಪ್ರಧಾನಿ ಮೋದಿಯವರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅಮಿತ್ ಶಾ ಹೇಳಿದರು.

ಸೆಂಗೋಲ್ ಈಗ ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿದೆ. ಅಲ್ಲಿಂದ ಈಗ ಹೊಸ ಸಂಸತ್ ಭವನಕ್ಕೆ ತರಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...