alex Certify ಭಾರತದ ನೆಲದಲ್ಲಿ ಇಂದಿನಿಂದ 2 ದಿನ ಐತಿಹಾಸಿಕ ‘G20 ಶೃಂಗಸಭೆ’ : ವಿಶ್ವದ ದಿಗ್ಗಜ ನಾಯಕರ ಮಹಾಸಂಗಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ನೆಲದಲ್ಲಿ ಇಂದಿನಿಂದ 2 ದಿನ ಐತಿಹಾಸಿಕ ‘G20 ಶೃಂಗಸಭೆ’ : ವಿಶ್ವದ ದಿಗ್ಗಜ ನಾಯಕರ ಮಹಾಸಂಗಮ

ಇಂದಿನಿಂದ 2 ದಿನ ಭಾರತದ ನೆಲದಲ್ಲಿ ಐತಿಹಾಸಿಕ ಜಿ20 ಶೃಂಗಸಭೆ ನಡೆಯಲಿದ್ದು, ವಿಶ್ವದ ದಿಗ್ಗಜರು ದೆಹಲಿಗೆ ಆಗಮಿಸಿದ್ದಾರೆ.ಅಮೆರಿಕ ಅಧ್ಯಕ್ಷ ಬಿಡೆನ್ ಸೇರಿದಂತೆ ಹಲವು ನಾಯಕರು ದೆಹಲಿಗೆ ಆಗಮಿಸಿದ್ದು, ಇಂದಿನಿಂದ ಐತಿಹಾಸಿಕ ಜಿ20 ಶೃಂಗಸಭೆ ನಡೆಯಲಿದೆ. ಪ್ರಧಾನಿ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.

ದೆಹಲಿಯ ಪ್ರಗತಿ ಮೈದಾನದಲ್ಲಿಸಭೆ ನಡೆಯಲಿದ್ದು,ಉಕ್ರೇನ್ ಯುದ್ಧದ ಪರಿಣಾಮಗಳು, ಬಡ ದೇಶಗಳ ಸಂಕಷ್ಟಗಳು, ಆರ್ಥಿಕ ಹಿಂಜರಿತದ ಸನ್ನಿವೇಶ ಮತ್ತು ಇತರ ಜಾಗತಿಕ ಸವಾಲುಗಳ ನಡುವೆಯೇ ದೆಹಲಿಯಲ್ಲಿ ಆಯೋಜನೆಗೊಂಡಿರುವ 2 ದಿನಗಳ ಜಿ20 ಶೃಂಗಸಭೆಗೆ ಇಂದು ಶನಿವಾರ ಚಾಲನೆ ಸಿಗಲಿದೆ. ಇದೇ ಮೊದಲ ಬಾರಿಗೆ ಜಿ20 ಒಕ್ಕೂಟದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊ೦ಡಿದ್ದು, ಭಾರತದಲ್ಲಿ ನಡೆದ 200ಕ್ಕೂ ಹೆಚ್ಚು ಸಭೆಗಳ ಸಮಾರೋಪದ ರೀತಿಯಲ್ಲಿ ಶನಿವಾರ ಮತ್ತು ಭಾನುವಾರ ಶೃಂಗ ಸಭೆ ಆಯೋಜಿ ಸಲಾಗಿದೆ.

ಮುಂಬರುವ ಅಧ್ಯಕ್ಷೀಯ ಚುನಾವಣೆಯ ರೇಸ್ನಲ್ಲಿರುವ 80 ವರ್ಷದ ಬಿಡೆನ್ ಅವರು 2021 ರಲ್ಲಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ದೆಹಲಿಗೆ ಬಂದಿಳಿದಿದ್ದಾರೆ.

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಅರ್ಜೆಂಟೀನಾದ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್, ಆಫ್ರಿಕನ್ ಯೂನಿಯನ್ ಚೇರ್ ಪರ್ಸನ್ ಅಜಾಲಿ ಅಸೋಮನಿ, ಪ್ರೆಸಿಡೆಂಟ್ ಆಫ್ ಯುರೋಪಿಯನ್ ಕಮಿಷನ್ ಉರ್ಸುಲಾ ವಾನ್ ಡೆ ಲೆಯಾನ್, ಐಎಂಎಫ್ ಮುಖ್ಯಸ್ಥರಾದ ಕ್ರಿಸ್ಟಲಿನಾ ಜೊರ್ಜೆವಾ,ಪ್ರೆಸಿಡೆಂಟ್ ಆಫ್ ಯುರೋಪಿಯನ್ ಕೌನ್ಸಿಲ್ ಚಾರ್ಲಸ್ ಮೈಕೆಲ್, WTO ಡೈರೆಕ್ಟರ್ ಜನರಲ್ ಎನ್ ಗೋಜಿ ವೆಕೊಂಗೊ ಇಲ್ವೆಲಾ, ಮೆಕ್ಸಿಕೊ ಮಿನಿಸ್ಟರ್ ಆಫ್ ಎಕಾನಮಿ ರಕ್ವೆಲ್ ಬನಾರೆಸ್ಟೊ ಸ್ಯಾಂಚೆಜ್, OECD ಜನರಲ್ ಸೆಕ್ರೆಟರಿ ಮಾತಿಸ್ ಕಾರ್ಮನ್ ಗೆ ಸ್ವಾಗತ ಕೋರಲಾಗಿದೆ.ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಆಗಮಿಸಿದ್ದರು. ಇಳಿದ ನಂತರ, ಅವರನ್ನು ಕೇಂದ್ರ ಸಚಿವ ಅಶ್ವಿನಿ ಚೌಬೆ, ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಮತ್ತು ಹಿರಿಯ ರಾಜತಾಂತ್ರಿಕರು ಆತ್ಮೀಯವಾಗಿ ಬರಮಾಡಿಕೊಂಡರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...