alex Certify ಕೋವಿಡ್​ ನಿರ್ಬಂಧ ಗಾಳಿಗೆ ತೂರಿ ಶ್ರಾವಣ ಆಚರಣೆ…..! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ನಿರ್ಬಂಧ ಗಾಳಿಗೆ ತೂರಿ ಶ್ರಾವಣ ಆಚರಣೆ…..! ವಿಡಿಯೋ ವೈರಲ್​

ಹಿಮಾಚಲ ಪ್ರದೇಶಕ್ಕೆ ಎಂಟ್ರಿ ನೀಡುವ ಅನ್ಯ ರಾಜ್ಯದ ನಿವಾಸಿಗಳಿಗೆ ಆನ್​​ಲೈನ್​ ನೋಂದಣಿಯನ್ನೇನೋ ಕಡ್ಡಾಯ ಮಾಡಲಾಗಿದೆ. ಆದರೆ ಕುಲ್ಲುವಿನ ಮಲಾನದಲ್ಲಿ ಶ್ರಾವಣ ಮಾಸ ಆಚರಿಸುವ ಭರದಲ್ಲಿ ಸ್ಥಳೀಯರೇ ಕೋವಿಡ್​ 19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ.

ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿರುವ ವಿಡಿಯೋಗಳಲ್ಲಿ ಸ್ಥಳೀಯರು ಸಂಗೀತ ವಾದ್ಯಗಳನ್ನು ನುಡಿಸುತ್ತಾ, ನೃತ್ಯ, ಗಾಯನದಲ್ಲಿ ಮಗ್ನರಾಗಿದ್ದಾರೆ. ಅಲ್ಲದೇ ಅನೇಕರು ಮಾಸ್ಕ್​ ಧರಿಸದೇ ಸಾಮಾಜಿಕ ಅಂತರ ಕಾಪಾಡದೇ ನಿರ್ಲಕ್ಷ್ಯ ತೋರಿದ್ದಾರೆ.

ಡೆಲ್ಟಾ ರೂಪಾಂತರಿಯ ಬಗ್ಗೆ ಐಸಿಎಂಆರ್​​ ಅಧ್ಯಯನದಲ್ಲಿ ಬಯಲಾಯ್ತು ಮಹತ್ವದ ಮಾಹಿತಿ

ಹಿಮಾಚಲ ಪ್ರದೇಶ ಸಿಎಂ ಜಯರಾಮ ಠಾಕೂರ್​ ಆಗಸ್ಟ್​ 18ರಂದು ಹಿಮಾಚಲ ಪ್ರದೇಶಕ್ಕೆ ವಿಸಿಟ್​ ನೀಡುವವರು ಆನ್​ಲೈನ್​ ನೋಂದಣಿ ಮಾಡೋದು ಕಡ್ಡಾಯ ಎಂದು ಆದೇಶ ಹೊರಿಡಿಸಿದ್ದರು. ಈ ಆದೇಶದಿಂದ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ಕಾರ್ಖಾನೆ ಕೆಲಸಗಾರರು, ಸರ್ಕಾರಿ ಅಧಿಕಾರಿಗಳು, ವೈದ್ಯಕೀಯ ಉದ್ದೇಶದಿಂದ ರಾಜ್ಯಕ್ಕೆ ಭೇಟಿ ನೀಡುವವರು ಸೇರಿದಂತೆ ಇನ್ನೂ ಕೆಲವರಿಗೆ ಮಾತ್ರ ವಿನಾಯಿತಿ ನೀಡಲಾಗಿತ್ತು.

ಅಲ್ಲದೇ ಲಸಿಕೆ ಪಡೆದ ಪೋಷಕರೊಂದಿಗೆ 18 ವರ್ಷದ ಪ್ರಾಯದವರು ರಾಜ್ಯಕ್ಕೆ ಭೇಟಿ ನೀಡಬಹುದು ಎಂದೂ ಈ ಆದೇಶದಲ್ಲಿ ತಿಳಿಸಲಾಗಿತ್ತು.

— ANI (@ANI) August 18, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...