ಕೋವಿಡ್ ನಿರ್ಬಂಧ ಗಾಳಿಗೆ ತೂರಿ ಶ್ರಾವಣ ಆಚರಣೆ…..! ವಿಡಿಯೋ ವೈರಲ್ 19-08-2021 12:32PM IST / No Comments / Posted In: Corona, Corona Virus News, Latest News, India, Live News ಹಿಮಾಚಲ ಪ್ರದೇಶಕ್ಕೆ ಎಂಟ್ರಿ ನೀಡುವ ಅನ್ಯ ರಾಜ್ಯದ ನಿವಾಸಿಗಳಿಗೆ ಆನ್ಲೈನ್ ನೋಂದಣಿಯನ್ನೇನೋ ಕಡ್ಡಾಯ ಮಾಡಲಾಗಿದೆ. ಆದರೆ ಕುಲ್ಲುವಿನ ಮಲಾನದಲ್ಲಿ ಶ್ರಾವಣ ಮಾಸ ಆಚರಿಸುವ ಭರದಲ್ಲಿ ಸ್ಥಳೀಯರೇ ಕೋವಿಡ್ 19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಸ್ಥಳೀಯರು ಸಂಗೀತ ವಾದ್ಯಗಳನ್ನು ನುಡಿಸುತ್ತಾ, ನೃತ್ಯ, ಗಾಯನದಲ್ಲಿ ಮಗ್ನರಾಗಿದ್ದಾರೆ. ಅಲ್ಲದೇ ಅನೇಕರು ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಪಾಡದೇ ನಿರ್ಲಕ್ಷ್ಯ ತೋರಿದ್ದಾರೆ. ಡೆಲ್ಟಾ ರೂಪಾಂತರಿಯ ಬಗ್ಗೆ ಐಸಿಎಂಆರ್ ಅಧ್ಯಯನದಲ್ಲಿ ಬಯಲಾಯ್ತು ಮಹತ್ವದ ಮಾಹಿತಿ ಹಿಮಾಚಲ ಪ್ರದೇಶ ಸಿಎಂ ಜಯರಾಮ ಠಾಕೂರ್ ಆಗಸ್ಟ್ 18ರಂದು ಹಿಮಾಚಲ ಪ್ರದೇಶಕ್ಕೆ ವಿಸಿಟ್ ನೀಡುವವರು ಆನ್ಲೈನ್ ನೋಂದಣಿ ಮಾಡೋದು ಕಡ್ಡಾಯ ಎಂದು ಆದೇಶ ಹೊರಿಡಿಸಿದ್ದರು. ಈ ಆದೇಶದಿಂದ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ಕಾರ್ಖಾನೆ ಕೆಲಸಗಾರರು, ಸರ್ಕಾರಿ ಅಧಿಕಾರಿಗಳು, ವೈದ್ಯಕೀಯ ಉದ್ದೇಶದಿಂದ ರಾಜ್ಯಕ್ಕೆ ಭೇಟಿ ನೀಡುವವರು ಸೇರಿದಂತೆ ಇನ್ನೂ ಕೆಲವರಿಗೆ ಮಾತ್ರ ವಿನಾಯಿತಿ ನೀಡಲಾಗಿತ್ತು. ಅಲ್ಲದೇ ಲಸಿಕೆ ಪಡೆದ ಪೋಷಕರೊಂದಿಗೆ 18 ವರ್ಷದ ಪ್ರಾಯದವರು ರಾಜ್ಯಕ್ಕೆ ಭೇಟಿ ನೀಡಬಹುದು ಎಂದೂ ಈ ಆದೇಶದಲ್ಲಿ ತಿಳಿಸಲಾಗಿತ್ತು. #WATCH | Himachal Pradesh: Locals gathered to play musical instruments, dance & sing as they celebrated Shravan in Malana, Kullu, yesterday pic.twitter.com/g5FKJQ96nn — ANI (@ANI) August 18, 2021