ದೇಶೀಯ ನಾಗರಿಕ ವಿಮಾನಯಾನಕ್ಕೆ ಉತ್ತೇಜನ ನೀಡುವುದು, ಆ ಮೂಲಕ ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪುಷ್ಠಿ ತುಂಬಲು ಮುಂದಾಗಿರುವ ಕೇಂದ್ರ ಸರಕಾರವು ತನ್ನ ಮಹತ್ವಾಕಾಂಕ್ಷಿ ಯೋಜನೆ ’’ಉಡಾನ್-2’’ ಅಡಿಯಲ್ಲಿ ದೇಶದ ಮೊಟ್ಟಮೊದಲ ಹೆಲಿಪೋರ್ಟ್ ನಿರ್ಮಿಸಿದೆ.
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಈ ಹೆಲಿಪೋರ್ಟ್‌ಗೆ ಸಿಎಂ ಜೈರಾಮ್ ಠಾಕೂರ್ ಅವರು ಚಾಲನೆ ಕೊಟ್ಟಿದ್ದಾರೆ. ಸ್ವದೇಶಿ ದರ್ಶನ ಅಡಿಯಲ್ಲಿ ನಿರ್ಮಾಣವಾಗಿರುವ ಒಟ್ಟು ಆರು ಹೆಲಿಪೋರ್ಟ್‌ಗಳ ಪೈಕಿ ಮೊದಲ ನಿಲ್ದಾಣ ಇದಾಗಿದೆ. ಬರೋಬ್ಬರಿ 18 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.
ಪ್ರವಾಸೋದ್ಯಮ ಜತೆಗೆ ತುರ್ತು ವೈದ್ಯಕೀಯ ಬಳಕೆಗೆ ಹೆಲಿಪೋರ್ಟ್ ಬಹಳ ಉಪಯುಕ್ತವಾಗಲಿದೆ. ಯಾಕೆಂದರೆ ಇಂದಿರಾಗಾಂಧಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಬಳಿಯೇ ಈ ಹೆಲಿಪೋರ್ಟ್ ತಲೆಯೆತ್ತಿದೆ ಎಂದು ಸಿಎಂ ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ.
ಮಾನಸಿಕ ಆಘಾತಕ್ಕೆ ಸಿಲುಕಿದ ರೋಗಿಗಳಿಗೆ ಬ್ರಿಟನ್ ವೈದ್ಯರಿಂದ ಹಾಸ್ಯ ಥೆರಪಿ ಸೂಚನೆ
ಹಿಮಾಲಯನ್ ಸರ್ಕ್ಯೂಟ್ ಆಫ್ ಸ್ವದೇಶ್ ದರ್ಶನ್ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರವು ಹೆಲಿಪೋರ್ಟ್ ನಿರ್ಮಾಣಕ್ಕೆ 12.13 ಕೋಟಿ ರೂ. ನೀಡಿದೆ. ಬಾಕಿ ಆರು ಕೋಟಿಯನ್ನು ಉಡಾನ್-2 ಯೋಜನೆ ಅಡಿಯಲ್ಲಿ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಬುಡಕಟ್ಟು ಜನರು ಹೆಚ್ಚಿರುವ ಪ್ರದೇಶಗಳು, ಗುಡ್ಡಗಾಡು ಜಿಲ್ಲೆಗಳು, ಈಶಾನ್ಯ ರಾಜ್ಯಗಳಿಗೆ ಪ್ರವಾಸೋದ್ಯಮ ಮತ್ತು ವಿಮಾನ ಸಂಪರ್ಕ ಹೆಚ್ಚಿಸುವತ್ತ ಉಡಾನ್ 2.0 ಯೋಜನೆ ಕೇಂದ್ರಿತವಾಗಿದೆ.