alex Certify ಹಾರ ಬದಲಿಸುವಾಗಲೇ ವರನ ಚುಡಾಯಿಸಿದ್ಲು ವಧು, ವಿಡಿಯೋ ವೈರಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ ಬದಲಿಸುವಾಗಲೇ ವರನ ಚುಡಾಯಿಸಿದ್ಲು ವಧು, ವಿಡಿಯೋ ವೈರಲ್…!

ಹಾರ ಬದಲಾಯಿಸುವ ಅಥವಾ ವರಮಾಲಾ ಸಮಾರಂಭದಲ್ಲಿ ವಧು ಒಬ್ಬಳು ತನ್ನ ವರನನ್ನು ಚುಡಾಯಿಸುವ ಹಾಸ್ಯಮಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ದೆಹಲಿಯ ಜನಪ್ರಿಯ ಮೇಕಪ್ ಕಲಾವಿದೆ ಪಾರುಲ್ ಗಾರ್ಗ್ ಅವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಧು ಸುಂದರವಾದ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದಾರೆ. ವರನು ಬೇಜ್ ಬಣ್ಣದ ಶೇರ್ವಾನಿಯನ್ನು ಧರಿಸಿದ್ದರು, ಮದುವೆಯ ಲುಕ್ ನಲ್ಲಿ ಈ ದಂಪತಿ ಸುಂದರವಾಗಿ ಕಾಣಿಸುತ್ತಿದ್ದಾರೆ.

ಇನ್ನೇನು ವರಮಾಲ ಶುರುವಾಯ್ತು ಎಂದು ಸಮಾರಂಭದಲ್ಲಿದ್ದ ವರ ಮತ್ತು ಅತಿಥಿಗಳು, ಈ ಕಾರ್ಯಕ್ರಮ ಸಾಮಾನ್ಯವಾಗಿ ಮಡೆಯುತ್ತದೆ ಎಂದು ಭಾವಿಸಿದ್ದರು.‌ ಆದರೆ ವಧು ತನ್ನ ಫ್ಲೆಕ್ಸಿಬಲಿಟಿ ಪ್ರದರ್ಶಿಸುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾಳೆ. ಸಾಮಾನ್ಯವಾಗಿ ವರಮಾಲ‌ ಸಂದರ್ಭದಲ್ಲಿ ವಧು ಮತ್ತು ವರ ಇಬ್ಬರನ್ನ ಅವರವರ ಕಡೆಯವರು ಎಷ್ಟು ಸಾಧ್ಯವೋ ಅಷ್ಟು ಎತ್ತರಕ್ಕೆ ಎತ್ತಿಕೊಂಡು ಮದುವೆಯ ಮನೆಯ ಸಂಭ್ರಮ ಹೆಚ್ಚಿಸುತ್ತಾರೆ. ಆದ್ರೆ ಈ ವಧು ಸ್ವಲ್ಪ ಡಿಫರೆಂಟ್, ವರ ಅವಳ ಕುತ್ತಿಗೆಗೆ ಮಾಲೆ ಹಾಕಲು ಪ್ರಯತ್ನಿಸಿದಾಗ ವಧು ಕೆಳಗೆ ಬಾಗಿದ್ದಾಳೆ. ದಿ ಮ್ಯಾಟ್ರಿಕ್ಸ್‌ ಚಿತ್ರದಲ್ಲಿ ಕಿಯಾನು ರೀವ್ಸ್ ಗುಂಡುಗಳನ್ನು ತಪ್ಪಿಸಲು ಭಾಗಿದ ರೀತಿಯಲ್ಲಿ ಈ ವಧು ಬಾಗಿದ್ದಾಳೆ.

ಸಧ್ಯ ಈ ಪೋಸ್ಟ್ ಗೆ 4.3 ಮಿಲಿಯನ್ ವೀವ್ಸ್ ಹಾಗೂ ಸುಮಾರು 6 ಲಕ್ಷ ಲೈಕ್‌ಗಳು ದೊರೆತಿವೆ. ವಧುವಿನ ತಮಾಷೆ ಪ್ರವೃತ್ತಿ ಹಾಗೂ ಫ್ಲೆಕ್ಸಿಬಲಿಟಿಯನ್ನ ಹೊಗಳಿರುವ ನೆಟ್ಟಿಗರು, ಆಕೆಯನ್ನ “ಯೋಗ ಶಿಕ್ಷಕಿ” ಮತ್ತು “ಮ್ಯಾಟ್ರಿಕ್ಸ್ ದುಲ್ಹಾನ್” ಎಂದು ಕರೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...