ಪರ್ವತದ ಮೇಲೆ ಕಳೆದುಹೋದವನೊಬ್ಬ, ರಕ್ಷಕರ ಸಂಖ್ಯೆಯನ್ನು ಅಪರಿಚಿತ ನಂಬರ್ ಗಳಿಂದ ಬಂದ ಕರೆಗಳೆಂಬ ಕಾರಣಕ್ಕೆ ಅವರ ಕರೆಗಳನ್ನು ನಿರ್ಲಕ್ಷಿಸಿ ಎಡವಟ್ಟು ಮಾಡಿಕೊಂಡಿದ್ದಾನೆ. ಯುಎಸ್ ನ ಕೊಲೊರಾಡೋದ ಮೌಂಟ್ ಎಲ್ಬರ್ಟ್ನಲ್ಲಿ ಪಾದಯಾತ್ರೆ ಮಾಡುವಾಗ ಹೆಸರಿಸದ ವ್ಯಕ್ತಿಯೊಬ್ಬ 24 ಗಂಟೆಗಳ ಕಾಲ ಕಳೆದುಹೋಗಿದ್ದಾನೆ. ರಕ್ಷಣೆ ತಂಡಗಳು ಅವನನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸಿದರೂ, ಆತ ಅಪರಿಚಿತ ಸಂಖ್ಯೆ ಎಂಬ ಕಾರಣಕ್ಕೆ ಕರೆಗಳಿಗೆ ಉತ್ತರಿಸಿಲ್ಲ.
ಸ್ವಚ್ಛ ಶೌಚಾಲಯ ಹೊಂದಿರುವವರಿಗೆ ಟಿವಿ, ಮೊಬೈಲ್ ʼಕೊಡುಗೆʼ
ಲೇಕ್ ಕೌಂಟಿ ಸರ್ಚ್ ಅಂಡ್ ರಿಸರ್ಚ್ (ಎಲ್ಸಿಎಸ್ಎಆರ್) ಪ್ರಕಾರ, ವ್ಯಕ್ತಿ ಅಕ್ಟೋಬರ್ 18 ರಂದು ಬೆಳಿಗ್ಗೆ 9 ಗಂಟೆಗೆ ಹೊರಟಿದ್ದಾನೆ. ಆದರೆ, ಅವನು ರಾತ್ರಿ 8 ಗಂಟೆಯಾದರೂ ಹಿಂತಿರುಗಿಲ್ಲ. ಸೆಲ್ ಫೋನ್ ಮೂಲಕ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಅವನನ್ನು ತಲುಪಲು ಅವರಿಗೆ ಸಾಧ್ಯವಾಗಿಲ್ಲ.
ಬಳಿಕ ಪಾದಯಾತ್ರಿಕನನ್ನು ಪತ್ತೆ ಹಚ್ಚಲು ಐದು ಜನರ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ. ಅಕ್ಟೋಬರ್ 19 ರಂದು ಮುಂಜಾನೆ 3 ಗಂಟೆಗೆ ತಂಡವು ಹಿಂತಿರುಗಿದೆ. ಆದರೆ ವ್ಯಕ್ತಿಯ ಸುಳಿವು ಮಾತ್ರ ಪತ್ತೆಯಾಗಿರಲಿಲ್ಲ. ಮತ್ತೊಂದು ತಂಡವನ್ನು ಬೇರೆ-ಬೇರೆ ಪ್ರದೇಶದಲ್ಲಿ ಶೋಧಕ್ಕೆ ಕಳುಹಿಸಲಾಗಿತ್ತು.
ಸಿಸಿ ಟಿವಿ ದೃಶ್ಯಾವಳಿ ನೋಡಿ ಸೋಮಾರಿ ಎಂದ ಬಾಸ್; ರಾಜೀನಾಮೆ ನೀಡಿ ಹೊರ ನಡೆದ ಉದ್ಯೋಗಿ
ಇನ್ನು ಕಾಣೆಯಾದ ವ್ಯಕ್ತಿ ಹೇಗೋ ಕಷ್ಟಪಟ್ಟು ಮರುದಿನ ಬೆಳಿಗ್ಗೆ 9:30 ಕ್ಕೆ ತನ್ನ ವಸತಿಗೃಹಕ್ಕೆ ಮರಳಿದ್ದಾನೆ. ರಾತ್ರಿ ಬೀಳುತ್ತಿದ್ದ ಮಂಜಿನಿಂದ ಆತ ಹಾದಿಯನ್ನು ಕಂಡುಕೊಳ್ಳಲಾಗಿರಲಿಲ್ಲವೆನ್ನಲಾಗಿದೆ. ದಾರಿ ಹಿಡಿಯಲು ರಾತ್ರಿ ಕಳೆಯಬೇಕಾಯ್ತು. ವಿವಿಧ ಹಾದಿಗಳಲ್ಲಿ ನಡೆದು, ಅಂತಿಮವಾಗಿ ಮರುದಿನ ಬೆಳಿಗ್ಗೆ ವಸತಿಗೃಹಕ್ಕೆ ತಲುಪಿರುವುದಾಗಿ ಹೇಳಿದ್ದಾನೆ. ಅಲ್ಲದೆ, ರಕ್ಷಣಾ ತಂಡವು ತನ್ನನ್ನು ಹುಡುಕುತ್ತಿದೆ ಎಂಬುದೇ ಅವನಿಗೆ ತಿಳಿದಿರಲಿಲ್ಲವಂತೆ. ಅಪರಿಚಿತ ಸಂಖ್ಯೆಯಿಂದ ಬಂದ ಕರೆಗಳೆಂಬ ಕಾರಣಕ್ಕೆ ಕರೆ ಸ್ವೀಕರಿಸಿರಲಿಲ್ಲವಂತೆ ಭೂಪ.