alex Certify ರಾಜ್ಯಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಿಹಿ ಸುದ್ದಿ: ಬೆಂಗಳೂರು –ಮುಂಬೈಗೆ ಕೇವಲ 6 ಗಂಟೆ ಜರ್ನಿ; ಸ್ಯಾಟಲೈಟ್ ರಿಂಗ್ ರೋಡ್, ಕನೆಕ್ಟಿವಿಟಿ ಹೈವೇ ನಿರ್ಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಿಹಿ ಸುದ್ದಿ: ಬೆಂಗಳೂರು –ಮುಂಬೈಗೆ ಕೇವಲ 6 ಗಂಟೆ ಜರ್ನಿ; ಸ್ಯಾಟಲೈಟ್ ರಿಂಗ್ ರೋಡ್, ಕನೆಕ್ಟಿವಿಟಿ ಹೈವೇ ನಿರ್ಮಾಣ

ಬೆಂಗಳೂರು: ಕರ್ನಾಟಕ -ತಮಿಳುನಾಡು ನಡುವೆ ಗ್ರೀನ್ ಕಾರಿಡಾರ್ ನಿರ್ಮಾಣ ಮಾಡಲಾಗುವುದು. 260 ಕಿಲೋಮೀಟರ್ ಉದ್ದದ ಗ್ರೀನ್ ಫೀಲ್ಡ್ ಕಾರಿಡಾರ್ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು -ಕಡಪ -ವಿಜಯವಾಡ ಹೈವೇ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. 288 ಕಿಲೋಮೀಟರ್ ಉದ್ದದ ಸ್ಯಾಟಲೈಟ್ ರಿಂಗ್ ರೋಡ್ ನಿರ್ಮಿಸಲಾಗುವುದು. ಮಂಗಳೂರು -ಮುಂಬೈ ಕನೆಕ್ಟಿವಿಟಿ ಹೈವೇ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

ದೇಶದ ಉತ್ತರ -ದಕ್ಷಿಣ ನಡುವಿನ ಸಂಚಾರದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಾರಿಡಾರ್ ಹೈವೇ ನಿರ್ಮಾಣ ಮಾಡಲಾಗುವುದು.ಬೆಂಗಳೂರು ಸ್ಯಾಟಲೈಟ್ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ. 16,000 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ. ಮುಂಬೈ -ಬೆಂಗಳೂರು ಎಕ್ಸ್ಪ್ರೆಸ್ ಹೈವೇ ನಿರ್ಮಾಣ ಮಾಡುತ್ತಿದ್ದು, ಇದರಿಂದ ಮುಂಬೈನಿಂದ ಬೆಂಗಳೂರಿಗೆ ಆರು ಗಂಟೆಯಲ್ಲಿ ಬರಬಹುದು. ಚೆನ್ನೈ- ಬೆಂಗಳೂರು, ಮುಂಬೈ -ಪುಣೆ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿನ ಸಂಚಾರದಟ್ಟಣೆಯ ಬಗ್ಗೆ ಅಧ್ಯಯನ ಮಾಡಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...