ಒಲಿಂಪಿಕ್ ವಿಜೇತ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ($7.2 ದಶಲಕ್ಷ), ಅತ್ಯಂತ ಸಿರಿವಂತ ಮಹಿಳಾ ಅಥ್ಲೀಟ್ಗಳ ಜಾಗತಿಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ.
ನಾಲ್ಕು ಬಾರಿ ಗ್ರಾನ್ ಸ್ಲಾಂ ವಿಜೇತ ಟೆನಿಸ್ ಆಟಗಾರ್ತಿ, ಜಪಾನಿನ ನವೋಮಿ ಒಸಾಕಾ ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಸಂಭಾವನೆ ಪಡೆಯುತ್ತಿರುವ ಮಹಿಳಾ ಅಥ್ಲೀಟ್ ಆಗಿದ್ದಾರೆ ಎಂದು ಬ್ಯುಸಿನೆಸ್ ತಿಳಿಸಿದೆ.
BREAKING: ದಿಢೀರ್ ನಿವೃತ್ತಿ ಘೋಷಿಸಿ ಕ್ರೀಡಾಭಿಮಾನಿಗಳಿಗೆ PV ಸಿಂಧು ಬಿಗ್ ಶಾಕ್..! ಹಲ್ಚಲ್ ಸೃಷ್ಠಿಸಿದ ಟ್ವೀಟ್
ಕ್ರೀಡೆಯಲ್ಲಿ ಮನೋವೈಜ್ಞಾನಿಕ ವಿಚಾರಗಳ ಕುರಿತು ಅರಿವು ಮೂಡಿಸಲು ಮುಂದಾಗಿರುವ ಒಸಾಕಾ ಕಳೆದ ವರ್ಷ ಬಹುಮಾನದ ದುಡ್ಡು ಮತ್ತು ಜಾಹೀರಾತುಗಳಿಂದ $57.3 ದಶಲಕ್ಷ ಸಂಗ್ರಹಿಸಿದ್ದಾರೆ. 10ಕ್ಕೂ ಹೆಚ್ಚಿನ ದೊಡ್ಡ ಬ್ರಾಂಡ್ಗಳಿಗೆ ಒಸಾಕಾ ರಾಯಭಾರಿಯಾಗಿದ್ದಾರೆ.
ಗ್ರಾನ್ ಸ್ಲಾಂ ಕೂಟಗಳ ವೇಳೆ ವಿಪರೀತವಾಗಿ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗುವುದರಿಂದಾಗಿ ತಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿರುವುದಾಗಿ ತಿಳಿಸಿದ ಒಸಾಕಾ, ಕಳೆದ ವರ್ಷ ಫ್ರೆಂಚ್ ಓಪನ್ ಕೂಟದಿಂದ ಹಿಂದೆ ಸರಿದಿದ್ದರು.
ಒಸಾಕಾ ಹೊರತುಪಡಿಸಿ ಮತ್ತೊಬ್ಬ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ($45.9 ದಶಲಕ್ಷ) ಮತ್ತು ಆಕೆಯ ಸಹೋದರಿ ವೀನಸ್ ವಿಲಿಯಮ್ಸ್ ($11.3 ದಶಲಕ್ಷ) ಸಹ ಪಟ್ಟಿಯಲ್ಲಿದ್ದಾರೆ. ಅಮೆರಿಕದ ಜಿಮ್ನಾಸ್ಟ್ ಸೈಮೋನೆ ಬೈಲ್ಸ್ ($10.1 ದಶಲಕ್ಷ) ಮತ್ತು ಸ್ಪಾನಿಶ್ ಟೆನಿಸ್ ಆಟಗಾರ್ತಿ ಗಾರ್ಬೈನ್ ಮುಗುರುಜ಼ಾ ($.8.8 ದಶಲಕ್ಷ) ಪಟ್ಟಿಯಲ್ಲಿ 5ನೇಯವರಾಗಿದ್ದಾರೆ.