alex Certify ಲಸಿಕೆ ಸ್ವೀಕರಿಸದವರಿಗೆ ಸಂಬಳ ಕಟ್​ ಎಂದಿದ್ದ ನಾಗಾಲ್ಯಾಂಡ್​ ಸರ್ಕಾರಕ್ಕೆ ಹೈಕೋರ್ಟ್​ ಮುಖಭಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಸ್ವೀಕರಿಸದವರಿಗೆ ಸಂಬಳ ಕಟ್​ ಎಂದಿದ್ದ ನಾಗಾಲ್ಯಾಂಡ್​ ಸರ್ಕಾರಕ್ಕೆ ಹೈಕೋರ್ಟ್​ ಮುಖಭಂಗ

ಕೊರೊನಾ ಲಸಿಕೆ ವಿಚಾರದಲ್ಲಿ  ನ್ಯಾಗಾಲ್ಯಾಂಡ್​ ಸರ್ಕಾರ ಜಾರಿಗೆ ತಂದಿರುವ ಆದೇಶದ ವಿರುದ್ಧ ಗುವಾಹಟಿ ಹೈಕೋರ್ಟ್ ಸ್ಟೇ ಜಾರಿ ಮಾಡಿದೆ. ನಾಗಾಲ್ಯಾಂಡ್​ ಸರ್ಕಾರವು ಸರ್ಕಾರಿ ನೌಕರರಿಗೆ ಕೊರೊನಾ ಲಸಿಕೆಯನ್ನು ಕಡ್ಡಾಯ ಮಾಡಿತ್ತು. ಮಾತ್ರವಲ್ಲದೇ ಯಾರು ಕೊರೊನಾ ಲಸಿಕೆಯನ್ನು ಸ್ವೀಕಾರ ಮಾಡುವುದಿಲ್ಲವೋ ಅಂತವರ ಸಂಬಳವನ್ನು ತಡೆಹಿಡಿಯಲಾಗುವುದು ಎಂದು ಆದೇಶ ನೀಡಿತ್ತು. ಇದು ಮಾತ್ರವಲ್ಲದೇ ಪ್ರತಿ  15 ದಿನಕ್ಕೊಮ್ಮೆ ಕೊರೊನಾ ನೆಗೆಟಿವ್​ ರಿಪೋರ್ಟ್​ ತೋರಿಸಿದಲ್ಲಿ ಮಾತ್ರ ಸೇವೆಗೆ ಹಾಜರಾಗಲು ಅವಕಾಶ ನೀಡಲಾಗಿತ್ತು. ಯಾರು ಕೊರೊನಾ ನೆಗೆಟಿವ್​ ವರದಿಯನ್ನು ತೋರಿಸುವುದಿಲ್ಲವೋ ಅಂತಹ ನೌಕರರನ್ನು ಸಂಬಳ ರಹಿತ ರಜೆಯಲ್ಲಿ ಇಡೋದಾಗಿ ಹೇಳಿತ್ತು. ನಾಗಾಲ್ಯಾಂಡ್​ ಸರ್ಕಾರ ಈ ಆದೇಶಗಳಿಗೆ ತಡೆ ನೀಡಿರುವ ಗುವಾಹಟಿ ಹೈಕೋರ್ಟ್ ನಿಯಮಾವಳಿಗಳಲ್ಲಿ ಬದಲಾವಣೆ ಮಾಡುವಂತೆ ಸೂಚನೆ ನೀಡಿದೆ.

ನಾಗಾಲ್ಯಾಂಡ್​ ಸರ್ಕಾರದ ಪರವಾಗಿ ಜುಲೈ 15ರಂದು ಆದೇಶ ಪ್ರಕಟಿಸಿದ್ದ ಸಚಿವ ಜೆ.ಆಲಂ, ಕೋವಿಡ್ ಲಸಿಕೆಯನ್ನು ಪಡೆಯದ ಸರ್ಕಾರಿ ನೌಕರರ ಸಂಬಳವನ್ನು ತಡೆಹಿಡಿಯಲಾಗುತ್ತದೆ. ಹಾಗೂ ಪ್ರತಿ 15 ದಿನಗಳಿಗೊಮ್ಮೆ ಕೊರೊನಾ ನೆಗೆಟಿವ್​ ವರದಿಯನ್ನು ತೋರಿಸದ ಸರ್ಕಾರಿ ನೌಕರರಿಗೆ ಸಂಬಳ ರಹಿತ ರಜೆಯಲ್ಲಿ ಇಡಲಾಗುವುದು ಎಂದು ಹೇಳಿದ್ದರು.

ಇಲ್ಲಿಯವರೆಗೆ 2.27 ಲಕ್ಷಕ್ಕೂ ಅಧಿಕ ಗರ್ಭಿಣಿಯರಿಗೆ ಕೊರೊನಾ ಲಸಿಕೆ :

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದೆ. ಈಗೀಗ ಗರ್ಭಿಣಿಯರೂ ಸಹ ಕೊರೊನಾ ಲಸಿಕೆಯನ್ನು ಸ್ವೀಕರಿಸುತ್ತಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ 2.27 ಲಕ್ಷಕ್ಕೂ ಅಧಿಕ ಗರ್ಭಿಣಿಯರು ಕೊರೊನಾ ಲಸಿಕೆಯ ಮೊದಲ ಡೋಸ್​ ಸ್ವೀಕರಿಸಿದ್ದಾರೆ. ತಮಿಳುನಾಡಿನಲ್ಲಿ ಅತೀ ಹೆಚ್ಚು ಗರ್ಭಿಣಿಯರು ಲಸಿಕೆಯನ್ನು ಪಡೆದಿದ್ದಾರೆ. ಇಲ್ಲಿ 78,838 ಗರ್ಭಿಣಿಯರಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ಇದಾದ ಬಳಿಕ ಎರಡನೇ ಸ್ಥಾನದಲ್ಲಿ ಆಂಧ್ರ ಪ್ರದೇಶ (34,228) , ಮೂರನೇ ಸ್ಥಾನದಲ್ಲಿ ಓಡಿಶಾ (29,821) , ನಾಲ್ಕನೇ ಸ್ಥಾನದಲ್ಲಿ ಮಧ್ಯ ಪ್ರದೇಶ (21,842), ಐದನೇ ಸ್ಥಾನದಲ್ಲಿ ಕೇರಳ (18,423 ) ಹಾಗೂ ಐದನೇ ಸ್ಥಾನದಲ್ಲಿ ಕರ್ನಾಟಕ (16,673) ಸ್ಥಾನ ಪಡೆದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...