ಕೊರೊನಾ ಲಸಿಕೆ ವಿಚಾರದಲ್ಲಿ ನ್ಯಾಗಾಲ್ಯಾಂಡ್ ಸರ್ಕಾರ ಜಾರಿಗೆ ತಂದಿರುವ ಆದೇಶದ ವಿರುದ್ಧ ಗುವಾಹಟಿ ಹೈಕೋರ್ಟ್ ಸ್ಟೇ ಜಾರಿ ಮಾಡಿದೆ. ನಾಗಾಲ್ಯಾಂಡ್ ಸರ್ಕಾರವು ಸರ್ಕಾರಿ ನೌಕರರಿಗೆ ಕೊರೊನಾ ಲಸಿಕೆಯನ್ನು ಕಡ್ಡಾಯ ಮಾಡಿತ್ತು. ಮಾತ್ರವಲ್ಲದೇ ಯಾರು ಕೊರೊನಾ ಲಸಿಕೆಯನ್ನು ಸ್ವೀಕಾರ ಮಾಡುವುದಿಲ್ಲವೋ ಅಂತವರ ಸಂಬಳವನ್ನು ತಡೆಹಿಡಿಯಲಾಗುವುದು ಎಂದು ಆದೇಶ ನೀಡಿತ್ತು. ಇದು ಮಾತ್ರವಲ್ಲದೇ ಪ್ರತಿ 15 ದಿನಕ್ಕೊಮ್ಮೆ ಕೊರೊನಾ ನೆಗೆಟಿವ್ ರಿಪೋರ್ಟ್ ತೋರಿಸಿದಲ್ಲಿ ಮಾತ್ರ ಸೇವೆಗೆ ಹಾಜರಾಗಲು ಅವಕಾಶ ನೀಡಲಾಗಿತ್ತು. ಯಾರು ಕೊರೊನಾ ನೆಗೆಟಿವ್ ವರದಿಯನ್ನು ತೋರಿಸುವುದಿಲ್ಲವೋ ಅಂತಹ ನೌಕರರನ್ನು ಸಂಬಳ ರಹಿತ ರಜೆಯಲ್ಲಿ ಇಡೋದಾಗಿ ಹೇಳಿತ್ತು. ನಾಗಾಲ್ಯಾಂಡ್ ಸರ್ಕಾರ ಈ ಆದೇಶಗಳಿಗೆ ತಡೆ ನೀಡಿರುವ ಗುವಾಹಟಿ ಹೈಕೋರ್ಟ್ ನಿಯಮಾವಳಿಗಳಲ್ಲಿ ಬದಲಾವಣೆ ಮಾಡುವಂತೆ ಸೂಚನೆ ನೀಡಿದೆ.
ನಾಗಾಲ್ಯಾಂಡ್ ಸರ್ಕಾರದ ಪರವಾಗಿ ಜುಲೈ 15ರಂದು ಆದೇಶ ಪ್ರಕಟಿಸಿದ್ದ ಸಚಿವ ಜೆ.ಆಲಂ, ಕೋವಿಡ್ ಲಸಿಕೆಯನ್ನು ಪಡೆಯದ ಸರ್ಕಾರಿ ನೌಕರರ ಸಂಬಳವನ್ನು ತಡೆಹಿಡಿಯಲಾಗುತ್ತದೆ. ಹಾಗೂ ಪ್ರತಿ 15 ದಿನಗಳಿಗೊಮ್ಮೆ ಕೊರೊನಾ ನೆಗೆಟಿವ್ ವರದಿಯನ್ನು ತೋರಿಸದ ಸರ್ಕಾರಿ ನೌಕರರಿಗೆ ಸಂಬಳ ರಹಿತ ರಜೆಯಲ್ಲಿ ಇಡಲಾಗುವುದು ಎಂದು ಹೇಳಿದ್ದರು.
ಇಲ್ಲಿಯವರೆಗೆ 2.27 ಲಕ್ಷಕ್ಕೂ ಅಧಿಕ ಗರ್ಭಿಣಿಯರಿಗೆ ಕೊರೊನಾ ಲಸಿಕೆ :