alex Certify ಬಂಧಿತ ವ್ಯಕ್ತಿಗೆ ತಿಳಿಯುವ ಭಾಷೆಯಲ್ಲೇ ಮಾಹಿತಿ ನೀಡಬೇಕು: ಹೈಕೋರ್ಟ್ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಧಿತ ವ್ಯಕ್ತಿಗೆ ತಿಳಿಯುವ ಭಾಷೆಯಲ್ಲೇ ಮಾಹಿತಿ ನೀಡಬೇಕು: ಹೈಕೋರ್ಟ್ ಆದೇಶ

ಬೆಂಗಳೂರು: ಯಾವುದೇ ವ್ಯಕ್ತಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದಾಗ ಏಕೆ ಬಂಧಿಸಲಾಗಿದೆ ಎಂಬುದರ ಬಗ್ಗೆ ಆತನಿಗೆ ಗೊತ್ತಿರುವ ಭಾಷೆಯಲ್ಲಿ ಮಾಹಿತಿ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.

ಈ ಆಧಾರದಲ್ಲಿ ಕಲಬುರಗಿಯ ಹುಚ್ಚಪ್ಪ ಅಲಿಯಾಸ್ ಧನರಾಜ್ ಕಾಳೆಬಾಗ್ ಎಂಬ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಮಹಮ್ಮದ್ ನವಾಜ್ ಮತ್ತು ರಾಜೇಶ್ ರೈ ಅವರಿದ್ದ ಕಲಬುರಗಿ ವಿಭಾಗಿಯ ಪೀಠದಲ್ಲಿ ಈ ಆದೇಶ ನೀಡಲಾಗಿದೆ.

ಅರ್ಜಿದಾರ ಮೂರನೇ ತರಗತಿವರೆಗೆ ಓದಿದ್ದು, ಅವರಿಗೆ ಇಂಗ್ಲೀಷ್ ಭಾಷೆ ಗೊತ್ತಿಲ್ಲ. ಬಂಧಿಸಿದ ಅಧಿಕಾರಿಗಳು ಆತನಿಗೆ ತಿಳಿದ ಭಾಷೆಯಲ್ಲಿ ದಾಖಲೆಗಳನ್ನು ಒದಗಿಸಬೇಕಿರುವುದು ಆದ್ಯ ಕರ್ತವ್ಯವಾಗಿದೆ. ಆತನಿಗೆ ಗೊತ್ತಾದ ಭಾಷೆಯಲ್ಲಿ ದಾಖಲೆ ಒದಗಿಸಿದರೆ ಆ ವ್ಯಕ್ತಿ ಸರ್ಕಾರದ ಸಲಹಾ ಮಂಡಳಿಯ ಮುಂದೆ ಒಂದು ಅವಕಾಶ ಕೋರಬಹುದಾಗಿತ್ತು. ಈ ಪ್ರಕರಣದಲ್ಲಿ ಬಂದಿತ ವ್ಯಕ್ತಿಗೆ ಗೂಂಡಾ ಕಾಯ್ದೆ ಅನ್ವಯ 21 ದಿನಗಳಲ್ಲಿ ಆತನಿಗೆ ಗೊತ್ತಿರುವ ಭಾಷೆಯಲ್ಲಿ ದಾಖಲೆಗೆ ಒದಗಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪತಿಯ ಬಂಧನಕ್ಕೆ ಹೊರಡಿಸಿದ ಆದೇಶ ನಿಯಮ ಬದ್ಧವಾಗಿಲ್ಲ. ತಿಳಿದ ಭಾಷೆಯಲ್ಲಿ ಮಾಹಿತಿ ಒದಗಿಸಿಲ್ಲ ಎಂದು ನ್ಯಾಯಪೀಠ ಹೇಳಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ ಅನೇಕ ಆದೇಶಗಳನ್ನು ಉಲ್ಲಂಘಿಸಿ ರಾಜ್ಯ ಸರ್ಕಾರದ ಆದೇಶವನ್ನು ರದ್ದು ಮಾಡಿದೆ.

ಅರ್ಜಿದಾರರ ವಿಚಾರದಲ್ಲಿ ವಿಜಯಪುರ ಡಿಸಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೂಂಡಾ ಕಾಯ್ದೆಯಡಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲು ಆದೇಶ ನೀಡಿದ್ದರು. ಅದನ್ನು ಸರ್ಕಾರ ಖಚಿತಪಡಿಸಿ 12 ತಿಂಗಳು ಬಂಧನದಲ್ಲಿರಿಸಲು ಆದೇಶಿಸಿದ್ದು, ಅದನ್ನು ಅರ್ಜಿದಾರರ ಪತ್ನಿ ಪ್ರಶ್ನಿಸಿದ್ದರು.

ಪತಿಯನ್ನು 12 ತಿಂಗಳು ಬಂಧನದಲ್ಲಿರಿಸಲು ಮಾಡಿರುವ ಆದೇಶ ಕಾನೂನುಬಾಹಿರವಾಗಿದೆ. ಗೂಂಡಾ ಕಾಯ್ದೆಯ ಸೆಕ್ಷನ್ 3(2)ರ ಅಡಿ ಮೊದಲಿಗೆ ಮೂರು ತಿಂಗಳು ಮಾತ್ರ ಬಂಧನಕ್ಕೆ ಆದೇಶಿಸಬಹುದು. ನಂತರ ಅಗತ್ಯವಿದ್ದರೆ ಮೂರು ತಿಂಗಳು ವಿಸ್ತರಿಸಬಹುದು ಎಂದು ಹೇಳಿದ್ದರು. ವಿಚಾರಣೆ ಆಲಿಸಿ ನ್ಯಾಯಪೀಠ ಬಂಧಿತ ವ್ಯಕ್ತಿಗೆ ತಿಳಿಯುವ ಭಾಷೆಯಲ್ಲೇ ಮಾಹಿತಿ ನೀಡಲು ಆದೇಶಿಸಿದ್ದು, ಪ್ರಕರಣ ರದ್ದುಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...