ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯದ ಹೊಗೆ ಕಳೆದ ಅನೇಕ ದಿನಗಳಿಂದ ಹರಿದಾಡುತ್ತಿದೆ. ಸಿಎಂ ಯಡಿಯೂರಪ್ಪ ವಿರುದ್ಧವೇ ಸಚಿವ ಸಿ.ಪಿ. ಯೋಗೀಶ್ವರ್ ಬಹಿರಂಗವಾಗಿ ಅಸಮಾಧಾನದ ಹೇಳಿಕೆಗಳನ್ನ ನೀಡ್ತಿರೋದು ವಿರೋಧ ಪಕ್ಷಗಳು ಆಡಿಕೊಳ್ಳಲು ಮಾಡಿಕೊಟ್ಟ ವೇದಿಕೆಯಂತಾಗಿತ್ತು. ಅಲ್ಲದೇ ಸಿಎಂ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಕೆಳಗೆ ಇಳೀತಾರೆ ಎಂಬ ಮಾತು ಕೂಡ ಕಳೆದ ಕೆಲದಿನಗಳಿಂದ ಹರಿದಾಡುತ್ತಿತ್ತು. ಆದರೆ ಈ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿರುವ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಪರ ಬ್ಯಾಟ್ ಬೀಸಿದೆ.
ಸಿಎಂ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದ ಸಚಿವ ಯೋಗಿಶ್ವರ್ ಸೇರಿದಂತೆ ಅನೇಕರಿಗೆ ಹೈಕಮಾಂಡ್ ಖಡಕ್ ವಾರ್ನಿಂಗ್ ನೀಡಿದೆ. ಮಾತ್ರವಲ್ಲದೇ ಸಹಿ ಸಂಗ್ರಹಕ್ಕೆ ಮುಂದಾದವರಿಗೂ ಪಕ್ಷದ ವರಿಷ್ಠರು ಎಚ್ಚರಿಕೆಯ ಸಂದೇಶವನ್ನ ರವಾನಿಸಿದ್ದಾರೆ. ಹೈಕಮಾಂಡ್ ಬಿ.ಎಸ್. ಯಡಿಯೂರಪ್ಪರ ಪರವಾಗಿದೆ.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಉಳಿದ ನಾಯಕರೂ ಸಹ ಏನೇ ಮಾತನಾಡುವುದಿದ್ದರೂ ಪಕ್ಷದ ವೇದಿಕೆಯಲ್ಲಿ ಮಾತ್ರ ಮಾತನಾಡಿ. ಸಹಿ ಸಂಗ್ರಹದಂತಹ ಕಾರ್ಯಗಳನ್ನ ಮಾಡಿದ್ರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಖಡಕ್ ಸಂದೇಶ ರವಾನಿಸಿದೆ.