alex Certify ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ ಮೆಕ್ಯಾನಿಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ ಮೆಕ್ಯಾನಿಕ್…!

ಸಧ್ಯ ಭಾರತದಲ್ಲಿ ಮದುವೆಯ ಸೀಸನ್ ನಡೆಯುತ್ತಿದೆ. ಹೊಸ ಯುಗದ ವಧುಗಳು ಮತ್ತು ವರರು ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ವಿಭಿನ್ನ ಪ್ರಯತ್ನಗಳಿಗೆ ಕೈ ಹಾಕುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಥೀಮ್ಡ್ ವೆಡ್ಡಿಂಗ್ ಸಖತ್ ಫೇಮಸ್ ಆಗ್ತಿದೆ‌. ದಂಪತಿಗಳು ರಥ, ತಿರುಗುವ ವೇದಿಕೆಗಳು, ಸ್ವಿಂಗ್‌ಗಳು ಮತ್ತು ಹೆಲಿಕಾಪ್ಟರ್‌ಗಳ ಮೇಲೆ ಆಗಮಿಸುವ ಮೂಲಕ ತಮ್ಮ ವಿವಾಹ ಮಂಟಪಕ್ಕೆ ಭವ್ಯವಾದ ಎಂಟ್ರಿ ನೀಡುವ ಟ್ರೆಂಡ್ ಹೆಚ್ಚಾಗುತ್ತಿದೆ.

ಆದರೆ ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆಯುವುದು ಬಹಳ ದುಬಾರಿಯಾಗಿದೆ, ಹಾಗೇ ಪ್ರತಿಯೊಬ್ಬರೂ ಅದನ್ನು ಬಾಡಿಗೆಗೆ ಪಡೆಯಲು ಸಾಧ್ಯವಿಲ್ಲ. ಇದಕ್ಕೆ ದೇಸಿ ಜುಗಾಡ್ ಕಂಡುಕೊಂಡಿರುವ, ಬಿಹಾರದ ಬಗಾಹಾದಲ್ಲಿರುವ ಮೆಕ್ಯಾನಿಕ್ ಕಮ್ ಕಲಾವಿದರೊಬ್ಬರು, ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಲು ನಿರ್ಧರಿಸಿದರು. ಇದರಿಂದಾಗಿ ನವ ದಂಪತಿಗಳ ತಮ್ಮ ನಿಜವಾದ ಹೆಲಿಕಾಪ್ಟರ್ ಅಲ್ಲದಿದ್ರು, ಹೆಲಿಕಾಪ್ಟರ್ ನಂತಹ ಕಾರನ್ನು ಮದುವೆಗೆ ಬಾಡಿಗೆಗೆ ಪಡೆಯಬಹುದು ಎಂಬುದು ಅವರ ನಂಬಿಕೆ.

ಸಿದ್ಧರಾಮಯ್ಯ ಅವಧಿಯ ಲೂಟಿ ಬಗ್ಗೆ ಪ್ರಸ್ತಾಪ: HDK ಮಾಹಿತಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ದೈನಿಕ್ ಭಾಸ್ಕರ್ ವರದಿ ಪ್ರಕಾರ, ಬಗಾಹಾದ ನಿವಾಸಿ ಗುಡ್ಡು ಶರ್ಮಾ ಅವರು 2 ಲಕ್ಷ ರೂಪಾಯಿ ಖರ್ಚು ಮಾಡಿ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಕನ್ವರ್ಟ್ ಮಾಡಿದ್ದಾರೆ. ಇಡೀ ವಾಹನವನ್ನು ಸಿದ್ಧಪಡಿಸಲು ಗುಡ್ಡು ಸಂವೇದಕಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ. ಅವರ ಆವಿಷ್ಕಾರವು ಹಿಟ್ ಆಗಿದ್ದು, ಈಗಾಗಲೇ 19 ಜನರು ಅದನ್ನು ಬುಕ್ ಮಾಡಿದ್ದಾರೆ. ಹೆಲಿಕಾಪ್ಟರ್ ಅನ್ನು 15,000 ರೂ. ಬೆಲೆಯಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ.

ಕಾರಿಗೆ ಹೆಲಿಕಾಪ್ಟರ್ ರೂಪ ನೀಡಿದ ಮೆಕ್ಯಾನಿಕ್ ಗುಡ್ಡು ಶರ್ಮಾ ಮಾತನಾಡಿ, ‘ಡಿಜಿಟಲ್ ಇಂಡಿಯಾ ಯುಗದಲ್ಲಿ ಈ ಆವಿಷ್ಕಾರ ಸ್ವಾವಲಂಬಿ ಭಾರತಕ್ಕೆ ಜೀವಂತ ಉದಾಹರಣೆಯಾಗಿದೆ. ಇಂತಹ ‘ಹೆಲಿಕಾಪ್ಟರ್’ ತಯಾರಿಸಲು ಒಂದೂವರೆ ಲಕ್ಷ ರೂಪಾಯಿಗೂ ಹೆಚ್ಚು ಹಣ ಬೇಕಾಗುತ್ತದೆ. ಆದರೆ ಹೈಟೆಕ್ ರೂಪ ನೀಡಲು ಎರಡು ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚವಾಗುತ್ತದೆ. ಇದರ ಬಾಡಿಗೆ 15,000 ರೂ.‌ ಎಂದಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...