ಯಾವುದಾದರೊಂದು ಸ್ಥಳವನ್ನ ನೆನೆಸಿಕೊಂಡಾಗ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ನೆನಪಾಗ್ತಾರೆ. ಇದೇ ರೀತಿಯ ಘಟನೆಗೆ ಸಂಬಂಧಿಸಿದ ಫೋಟೋವೊಂದು ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ. ಇಂಗ್ಲೆಂಡ್ನ ಮಾರ್ಗೆಟ್ ಎಂಬ ನಗರದಲ್ಲಿನ ಪಾರ್ಕ್ ಒಂದರಲ್ಲಿನ ಕಲ್ಲಿನ ಬೆಂಚಿನ ಫೋಟೋ ಇದಾಗಿದೆ.
ಈ ಬೆಂಚನ್ನ ಹೇಯ್ಡನ್ ಕೇಯ್ಸ್ ಎಂಬ ವ್ಯಕ್ತಿಯ ಸವಿ ನೆನಪಿಗಾಗಿ ಅರ್ಪಿಸಲಾಗಿದೆ. ಆದರೆ ಇದರ ಮೇಲೆ ಬರೆದಿರುವ ಬರಹ ನೆಟ್ಟಿಗರಲ್ಲಿ ಆಶ್ಚರ್ಯವನ್ನ ಹುಟ್ಟುಹಾಕಲು ಕಾರಣವಾಗಿದೆ.
ಈ ಬೆಂಚನ್ನ ಹೇಯ್ಡನ್ ಕೇಯ್ಸ್ಗೆ ಅರ್ಪಿಸಲಾಗಿದೆ. ಇವರನ್ನ ಕುಟುಂಬಸ್ಥರು ಹಾಗೂ ಸ್ನೇಹಿತರು ತುಂಬಾನೆ ಮಿಸ್ ಮಾಡಿಕೊಳ್ತಿದ್ದಾರೆ. ಅವರು ಇನ್ನೂ ಮೃತಪಟ್ಟಿಲ್ಲ. ಆದರೆ ಈಗ ಅತಿಯಾಗಿ ಆಂಟಿ ಸೋಶಿಯಲ್ ಆಗಿದ್ದಾರೆ ಎಂದು ಬರೆಯಲಾಗಿದೆ.
ಈ ಬೆಂಚಿನ ಫೋಟೋವನ್ನ ಮೊದಲ ಬಾರಿಗೆ ರೆಡಿಟ್ನಲ್ಲಿ ಶೇರ್ ಮಾಡಲಾಗಿದೆ. ಇದೀಗ ಈ ಬೆಂಚಿನ ಫೊಟೋ ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಅಂದರೆ ಸೋಶಿಯಲ್ ಮೀಡಿಯಾವ ವಿವಿಧ ವೇದಿಕೆಗಳಲ್ಲೂ ಹರಿದಾಡುತ್ತಿದೆ.