alex Certify ಪುಟ್ಟ ಬಾಲಕನನ್ನು ನಾಯಿ ದಾಳಿಯಿಂದ ರಕ್ಷಿಸಿದ ಸಾಕು ಶ್ವಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನನ್ನು ನಾಯಿ ದಾಳಿಯಿಂದ ರಕ್ಷಿಸಿದ ಸಾಕು ಶ್ವಾನ….!

ಫ್ಲೋರಿಡಾ: ನಿಯತ್ತು, ನಿಷ್ಠೆ ಎಂದಾಕ್ಷಣ ನೆನಪಿಗೆ ಬರುವುದು ನಾಯಿಯೇ ವಿನಾ ಮನುಷ್ಯನಲ್ಲ. ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿರುವ ನಾಯಿಗಳು ಎಷ್ಟೋ ಬಾರಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಮಾಲೀಕನನ್ನು ರಕ್ಷಿಸುವುದಿದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದ್ದು, ನಾಯಿಯ ನಿಷ್ಠೆಗೆ ಜನರು ಫಿದಾ ಆಗಿದ್ದಾರೆ.

ಆರು ವರ್ಷದ ಬಾಲಕನ ಮೇಲೆ ಎರಡು ನಾಯಿಗಳ ದಾಳಿ ಮಾಡಿದಾಗ ಬಾಲಕನ ಮನೆಯ ಸಾಕು ನಾಯಿ ಆ ನಾಯಿಗಳ ಮೇಲೆ ದಾಳಿ ಮಾಡಿ ಬಾಲಕನನ್ನು ರಕ್ಷಿಸಿರುವ ಘಟನೆ ಇದಾಗಿದೆ.

6 ವರ್ಷದ ಬಾಲಕ ಫ್ಲೋರಿಡಾದಲ್ಲಿ ಟ್ಯಾಂಕ್ ಎಂಬ ಜರ್ಮನ್ ಶೆಫರ್ಡ್ ಜೊತೆ ಆಟವಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವನು ಓಡಿಹೋಗುತ್ತಿದ್ದಂತೆಯೇ ಎರಡು ನಾಯಿಗಳು ಅವನ ಮೇಲೆ ಎರಗಲು ಬರುತ್ತವೆ. ಅಂಥ ಸಂದರ್ಭದಲ್ಲಿ ಟ್ಯಾಂಕ್​ ಆ ನಾಯಿಗಳನ್ನು ಓಡಿಸಿ ಮಗುವನ್ನು ರಕ್ಷಿಸಿದೆ.

ಬಾಲಕ ಕಿರುಚಿಕೊಳ್ಳುತ್ತಲೇ ತಾಯಿ ಓಡಿ ಬಂದು ಮಗನನ್ನು ಅಪ್ಪಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋಗೆ ಲಕ್ಷಾಂತರ ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದು, ನಾಯಿಯ ನಿಯತ್ತಿನ ಬಗ್ಗೆ ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...