alex Certify ಹೀರೋ Xtreme 200S 4V ಬೈಕ್ ಅನಾವರಣ; ಇಲ್ಲಿದೆ ಇದರ ಬೆಲೆ ಸೇರಿದಂತೆ ಇತರೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀರೋ Xtreme 200S 4V ಬೈಕ್ ಅನಾವರಣ; ಇಲ್ಲಿದೆ ಇದರ ಬೆಲೆ ಸೇರಿದಂತೆ ಇತರೆ ವಿವರ

ವಾಹನ ತಯಾರಿಕಾ ಸಂಸ್ಥೆ ಹೀರೋ ಮೋಟೋಕಾರ್ಪ್ ಬಹು ನಿರೀಕ್ಷಿತ Xtreme 200S 4V ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಬೈಕ್ ನ ಬೆಲೆ ದೆಹಲಿಯ ಎಕ್ಸ್ ಶೋ ರೂಂಗಳಲ್ಲಿ 1.41 ಲಕ್ಷ ರೂ. ಈ ಮೋಟಾರ್‌ಬೈಕ್ ಪವರ್-ಪ್ಯಾಕ್ಡ್ ರೈಡಿಂಗ್ ಡೈನಾಮಿಕ್ಸ್‌ ನ ನಿಜವಾದ ಸಾಕಾರವಾಗಿದೆ. ಸ್ಪೋರ್ಟಿ ರೈಡಿಂಗ್ ಅನುಭವಕ್ಕಾಗಿ ಮೋಟಾರ್‌ಸೈಕಲ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳನ್ನು ಹೊಂದಿದೆ.

ಹೀರೋ ಎಕ್ಸ್ ಟ್ರೀಮ್ 200S 4V: ವಿನ್ಯಾಸ

ಸೌಂದರ್ಯದ ವಿಷಯದಲ್ಲಿ ಹೊಸ ಹೀರೋ Xtreme 200S 4V ಅತ್ಯಾಧುನಿಕ LED ಹೆಡ್‌ಲೈಟ್‌ಗಳು, LED ಡೇಟೈಮ್ ರನ್ನಿಂಗ್ ಲೈಟ್‌ಗಳು (DRL ಗಳು), LED ಲೈಟ್ ಗೈಡ್‌ಗಳೊಂದಿಗೆ ಸಿಗ್ನೇಚರ್ LED ಟೈಲ್-ಲೈಟ್‌ಗಳು ಮತ್ತು ನಯವಾದ ಸ್ಪ್ಲಿಟ್ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ.

ಹೀರೋ ಎಕ್ಸ್ ಟ್ರೀಮ್ 200S 4V: ವೈಶಿಷ್ಟ್ಯಗಳು

ಈ ಮೋಟಾರ್‌ ಸೈಕಲ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಸ್ಮಾರ್ಟ್‌ಫೋನ್ ಸಂಪರ್ಕ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕರೆ ಮತ್ತು ಎಸ್‌ಎಂಎಸ್ ಎಚ್ಚರಿಕೆಗಳಿಗಾಗಿ ಬ್ಲೂಟೂತ್ ಕಾರ್ಯನಿರ್ವಹಣೆ ಸೇರಿವೆ. ಗೇರ್ ಇಂಡಿಕೇಟರ್, ಇಕೋ-ಮೋಡ್ ಇಂಡಿಕೇಟರ್, ಸರ್ವಿಸ್ ರಿಮೈಂಡರ್ ಮತ್ತು ಟ್ರಿಪ್ ಮೀಟರ್‌ನಂತಹ ಉಪಯುಕ್ತ ವೈಶಿಷ್ಟ್ಯಗಳನ್ನು ಹೊಂದಿದೆ.

ಹೀರೋ ಎಕ್ಸ್ ಟ್ರೀಮ್ 200S 4V: ಹ್ಯಾಂಡ್ಲಿಂಗ್

ಹೆಚ್ಚು ಆರಾಮದಾಯಕ ಮತ್ತು ನಿಖರವಾದ ನಿರ್ವಹಣೆ ಅನುಭವವನ್ನ ನೀಡುತ್ತದೆ. ಅಸಾಧಾರಣ ಹಿಡಿತವನ್ನ ಒದಗಿಸುತ್ತದೆ. ನವೀಕರಿಸಿದ ಮುಂಭಾಗ ಮತ್ತು ಹಿಂಭಾಗದ ಪೆಟಲ್ ಡಿಸ್ಕ್ ಬ್ರೇಕ್‌ಗಳು, ಸಿಂಗಲ್-ಚಾನೆಲ್ ABSನಿಂದ ಪೂರಕವಾಗಿದೆ. ಸಮರ್ಥ ಬ್ರೇಕಿಂಗ್ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ.

ಹೀರೋ ಎಕ್ಸ್‌ಟ್ರೀಮ್ 200S 4V: ಪವರ್‌ಟ್ರೇನ್

ಎಕ್ಸ್ ಟ್ರೀಮ್ 200S 4V ದೃಢವಾದ 200cc 4-ವಾಲ್ವ್ ಆಯಿಲ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ, ಇದು ಓಬಿಡಿ2 ಮತ್ತು ಎಫ್‌20-ಕಾಂಪ್ಲೈಂಟ್ ಎಂಜಿನ್‌ನೊಂದಿಗೆ XSense ತಂತ್ರಜ್ಞಾನವನ್ನು ಹೊಂದಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 19.1 ಪಿಎಸ್ ಶಕ್ತಿ ಮತ್ತು 6,500ಆರ್‌ಪಿಎಂನಲ್ಲಿ 17.35 ನ್ಯೂಟನ್‌ ಮೀಟರ್‌ ಗರಿಷ್ಠ ಟಾರ್ಕ್ ಅನ್ನು ಹೊರ ಹಾಕುತ್ತದೆ

ಹೀರೋ ಎಕ್ಸ್ ಟ್ರೀಮ್ 200S 4V: ಬಣ್ಣಗಳ ಆಯ್ಕೆ

Hero Xtreme 200S 4V ಮೂನ್ ಯೆಲ್ಲೋ, ಪ್ಯಾಂಥರ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಪ್ರೀಮಿಯಂ ಸ್ಟೆಲ್ತ್ ಆವೃತ್ತಿ ಸೇರಿದಂತೆ ರೋಮಾಂಚಕ ಡ್ಯುಯಲ್-ಟೋನ್ ಸಂಯೋಜನೆಗಳಲ್ಲಿ ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...