ಅಥೆರ್ ಎನರ್ಜಿಯಲ್ಲಿ 420 ಕೋಟಿ ರೂ.ಗಳ ಹೂಡಿಕೆ ಮಾಡಲು ಹೀರೋ ಮೋಟೋಕಾರ್ಪ್‌ನ ಹಿರಿಯ ನಾಯಕತ್ವ ಮಂಡಳಿ ಒಪ್ಪಿಕೊಂಡಿದೆ. ಭವಿಷ್ಯದ ಮೊಬಿಲಿಟಿಯ ದೃಷ್ಟಿಯಿಂದ ಈ ನಿರ್ಧಾರಕ್ಕೆ ಹೀರೋ ಬಂದಿದೆ.
ಎಲೆಕ್ಟ್ರಿಕ್ ದ್ವಿ-ಚಕ್ರ ವಾಹನದ ಸ್ಟಾರ್ಟ್‌ಅಪ್‌ನಲ್ಲಿ ಸದ್ಯ 34.8 ಪ್ರತಿಶತ ಶೇರು ಹೊಂದಿರುವ ಹೀರೋ ಈ ಹೂಡಿಕೆಯಿಂದಾಗಿ ಇನ್ನಷ್ಟು ಹೆಚ್ಚಿನ ಪಾಲು ಹೊಂದಲಿದೆ. ಜಗತ್ತಿನ ಅತಿ ದೊಡ್ಡ ದ್ವಿ-ಚಕ್ರ ವಾಹನ ಉತ್ಪಾದಕ 2016ರಿಂದಲೂ ಅಥೆರ್‌ನಲ್ಲಿ ಹೂಡಿಕೆ ಮಾಡಿಕೊಂಡು ಬಂದಿದೆ.
ಬುಲ್ಲಿ ಬಾಯಿ ಪ್ರಕರಣ: ಬಂಧಿತ ನೀರಜ್ ಬಗ್ಗೆ ತಂದೆಯಿಂದಲೇ ಸ್ಫೋಟಕ ಮಾಹಿತಿ ಬಹಿರಂಗ
ಚಾರ್ಜಿಂಗ್ ಮೂಲ ಸೌಕರ್ಯ, ತಂತ್ರಜ್ಞಾನ ಮತ್ತು ಸೋರ್ಸಿಂಗ್ ವಿಚಾರದಲ್ಲಿ ಅಥೆರ್ ಜೊತೆಗೆ ಇನ್ನಷ್ಟು ಪಾಲುದಾರಿಕೆ ಮಾಡಿಕೊಳ್ಳಲು ಹೀರೋ ಚಿಂತನೆ ನಡೆಸುತ್ತಿದೆ. ಎಲೆಕ್ಟ್ರಿಕ್ ದ್ವಿ-ಚಕ್ರ ವಾಹನಗಳಿಗೆ ಚಾರ್ಜಿಂಗ್ ಪರಿಹಾರಗಳ ಸಂಬಂಧ ಹೀರೋ ಮತ್ತು ಅಥೆರ್ ಅದಾಗಲೇ ಪಾಲುದಾರಿಕೆ ಪಡೆದಿವೆ.
ಭಾರತದಲ್ಲಿ ದ್ವಿ-ಚಕ್ರ ವಾಹನಗಳಿಗೆ ಏಕರೂಪದ ಚಾರ್ಜಿಂಗ್ ವ್ಯವಸ್ಥೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಹೀರೋ ಅದಾಗಲೇ ತನ್ನ ಬೌದ್ಧಿಕ ಆಸ್ತಿಯ ವಿವರಗಳನ್ನು ಸಾರ್ವಜನಿಕಗೊಳಿಸಿದೆ.
ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ತನ್ನದೇ ಆದ ಸ್ಥಾನಮಾನ ಪಡೆಯಲು ಸಜ್ಜಾಗುತ್ತಿರುವ ಹೀರೋ ತನ್ನ ಮೊದಲ ಇವಿಯನ್ನು ಇದೇ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಿದೆ. ಜೈಪುರದಲ್ಲಿರುವ ಕಂಪನಿಯ ತಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಸಿಐಟಿ) ಮತ್ತು ಮ್ಯೂನಿಕ್‌ನಲ್ಲಿರುವ ಟೆಕ್ ಸೆಂಟರ್‌ಗಳ ಸಹಯೋಗದಲ್ಲಿ ಈ ಹೊಸ ದ್ವಿಚಕ್ರ ವಾಹನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಹೊಸ ಮಾಡೆಲ್ ಅನ್ನು ಆಂಧ್ರ ಪ್ರದೇಶದ ಚಿತ್ತೂರಿನಲ್ಲಿರುವ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು.
ಅಥೆರ್ ಅಲ್ಲದೇ ತೈವಾನ್ ನ ಗೊಗೋರೋ ಇಂಕ್ ಜೊತೆಯಲ್ಲೂ ಇವಿ ವಾತಾವರಣಕ್ಕೆ ಅಗತ್ಯವಾದ ಉತ್ಪನ್ನಗಳು, ತಂತ್ರಜ್ಞಾನ, ಮಾರಾಟ, ಸರ್ವೀಸ್, ಗ್ರಾಹಕ ಸೇವೆ, ಕಾರ್ಯಾಚರಣೆ ಮತ್ತು ಸಂಶೋಧನೆ ಸಂಬಂಧ ಒಡಂಬಡಿಕೆಗಳನ್ನು ಹೀರೋ ಮಾಡಿಕೊಂಡಿದೆ.