ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಹೀರೋ ಎಲೆಕ್ಟ್ರಿಕ್, ತಾನು ಉತ್ಪಾದಿಸುವ ಎಲ್ಲಾ ಇವಿಗಳಿಗೆ ಬ್ಯಾಟರಿಗಳನ್ನು ಪೂರೈಸಲು ಬೆಂಗಳೂರು ಮೂಲದ ಬ್ಯಾಟರಿ ತಂತ್ರಜ್ಞಾನ ಸ್ಟಾರ್ಟ್‌ಅಪ್ ಲಾಗ್9 ಮೆಟೀರಿಯಲ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಲಾಗ್9ನ ’ರ‍್ಯಾಪಿಡ್‌ಎಕ್ಸ್’ ಬ್ಯಾಟರಿಯನ್ನು ಜೀರೋದ ಎಲೆಕ್ಟ್ರಿಕ್ 2ಡಬ್ಲ್ಯೂಗೆ ಅಳವಡಿಸಿದಲ್ಲಿ, 15 ನಿಮಿಷಗಳಲ್ಲಿ ಅದನ್ನು ಪೂರ್ತಿಯಾಗಿ ಚಾರ್ಜ್ ಮಾಡಬಹುದಾಗಿದೆ.
“ಹೀರೋ ವಾಹನಗಳಿಗೆ ಅಳವಡಿಸಿರುವ ನಮ್ಮ ಇನ್‌ಸ್ಟಾಚಾರ್ಜ್ ಬ್ಯಾಟರಿಗಳು, ಬಿ2ಬಿಯ ಕೊನೆ ಮೈಲಿಯ ಡೆಲಿವರಿ ಸೇವೆಗಳಲ್ಲಿ ಕಾರ್ಯಾಚರಣಾ ವೆಚ್ಚಗಳನ್ನು ತಗ್ಗಿಸುವ ಮೂಲಕ ಒಳ್ಳೆಯ ಪ್ರದರ್ಶನ, ಶಕ್ತಿ ಹಾಗೂ ನೆಮ್ಮದಿ ನೀಡುತ್ತವೆ ಜೊತೆಗೆ ಮಾಲಿನ್ಯಕಾರಕಗಳ ಹೊರಸೂಸುವಿಕೆಯನ್ನೂ ಕಡಿಮೆ ಮಾಡುತ್ತಿವೆ,” ಎಂದು ಲಾಗ್9 ಮೆಟೀರಿಯಲ್ಸ್‌ನ ಸ್ಥಾಪಕ ಹಾಗೂ ಸಿಇಓ ಡಾ. ಅಕ್ಷಯ್ ಸಿಂಘಲ್ ತಿಳಿಸಿದ್ದಾರೆ.
ರಾತ್ರಿ ಚಾಕೋಲೇಟ್ ತಿಂದರೆ ಏನಾಗುತ್ತದೆ ಗೊತ್ತಾ…?
ತನ್ನ ರ‍್ಯಾಪಿಡ್‌ಎಕ್ಸ್ ಬ್ಯಾಟರಿಗಳನ್ನು ಲಾಗ್9 ಬಿ2ಬಿ ಡೆಲಿವರಿ ಪೂರೈಕೆದಾರರಾದ ಅಮೇಜ಼ಾನ್, ಶಾಡೋಫ್ಯಾಕ್ಸ್, ಡೆಲ್ಹಿವರಿ, ಫ್ಲಿಪ್‌ಕಾರ್ಟ್ ಹಾಗೂ ಬೂಕ್‌ಮೇನಿಯಾಗಳ ಪೈಲಟ್‌ಗಳ ಮೂಲಕ ಅದಾಗಲೇ ಪ್ರಯೋಗ ಮಾಡಿದೆ.
ಮುಂದಿನ ದಿನಗಳಲ್ಲಿ ತನ್ನ ಬ್ಯಾಟರಿಗಳು 9ಪಟ್ಟು ತ್ವರಿತವಾಗಿ ಚಾರ್ಜ್ ಆಗಿ, 9 ಪಟ್ಟು ಉತ್ತಮ ಪ್ರದರ್ಶನ ನೀಡುತ್ತಾ, 9 ಪಟ್ಟು ಕಡಿಮೆ ಹಾಳಾಗುತ್ತಾ, 9 ಪಟ್ಟು ಹೆಚ್ಚಿನ ಆಯುಷ್ಯ ಹೊಂದುವಂತೆ ಅಭಿವೃದ್ಧಿಪಡಿಸುವ ಗುರಿ ಇರುವುದಾಗಿ ಲಾಗ್9 ಹೇಳಿಕೊಂಡಿದೆ.
ಬ್ಯಾಟರಿಗಳನ್ನು ಮಾರುಕಟ್ಟೆಯಲ್ಲಿ ಹಾಗೂ ಸೇವೆಯ ರೂಪದಲ್ಲಿ ಬ್ಯಾಟರಿ (ಬ್ಯಾಸ್) ಬ್ಯುಸಿನೆಸ್ ಮಾದರಿಗಳಲ್ಲಿ ಮಾರಾಟಕ್ಕೆ ತರಲು ಹೀರೋ ಎಲೆಕ್ಟ್ರಿಕ್ ಮತ್ತು ಲಾಗ್9 ಜೊತೆಯಾಗಿ ಕೆಲಸ ಮಾಡುತ್ತಿವೆ.