alex Certify ರಾತ್ರಿ ಚಾಕೋಲೇಟ್ ತಿಂದರೆ ಏನಾಗುತ್ತದೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಚಾಕೋಲೇಟ್ ತಿಂದರೆ ಏನಾಗುತ್ತದೆ ಗೊತ್ತಾ…?

ಒತ್ತಡದ ಜೀವನ ಶೈಲಿಯಿಂದ ಜನರು ಆಹಾರದ ಬಗ್ಗೆ ನಿರ್ಲಕ್ಷ್ಯ ವಹಿಸಿ ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ಅವರ ದೇಹ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಅಂತವರು ತೂಕ ಇಳಿಸಿಕೊಳ್ಳಲು ಕೆಲವು ಆಹಾರ ಕ್ರಮಗಳನ್ನು, ಯೋಗ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಅದರ ಜೊತೆಗೆ ನೀವು ತೂಕ ಇಳಿಸಲು ಬಯಸಿದ್ದರೆ ರಾತ್ರಿಯ ವೇಳೆ ಈ ಆಹಾರಗಳಿಂದ ದೂರವಿರಿ.

ಪರಿಷತ್ ತೀರ್ಪು: ಇಲ್ಲಿದೆ ಸಂಪೂರ್ಣ ಮಾಹಿತಿ

ಚಾಕೋಲೇಟ್ : ರಾತ್ರಿಯ ವೇಳೆ ಚಾಕೋಲೇಟ್ ತಿನ್ನುವುದು ಬೇಗನೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಚಾಕೋಲೇಟ್ ನಲ್ಲಿ ಕೆಫೀನ್ ಮತ್ತು ಸಕ್ಕರೆ ಅಧಿಕವಾಗಿದೆ. ಇದು ನಿಮ್ಮನ್ನು ದಪ್ಪವಾಗಿಸುತ್ತದೆ. ಹಾಗಾಗಿ ಚಾಕೋಲೇಟ್ ಹಗಲಿನ ವೇಳೆ ಮಾತ್ರ ಸೇವಿಸಿ.

ನೂಡಲ್ಸ್ : ಕೆಲವರು ತುಂಬಾ ಹಸಿವಿನಿಂದ ರಾತ್ರಿ ನೂಡಲ್ಸ್ ಸೇವಿಸುತ್ತಾರೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬು ಹೆಚ್ಚಾಗಿರುತ್ತದೆ. ಇದು ಆರೋಗ್ಯಕ್ಕೂ ಹಾನಿಕಾರಕ.

ಸೋಡಾ : ಅನೇಕರು ರಾತ್ರಿಯ ವೇಳೆ ಸೋಡಾವನ್ನು ಕುಡಿಯುತ್ತಾರೆ. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಇದು ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ.

ಸಿಹಿ ಮತ್ತು ಹುರಿದ ಆಹಾರ : ಸಿಹಿ ತಿಂಡಿಯಲ್ಲಿ ಸಕ್ಕರೆಯಂಶ ಮತ್ತು ಹುರಿದ ಆಹಾರದಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುತ್ತದೆ. ಇದು ತೂಕವನ್ನು ಬಹಳ ಬೇಗನೆ ಹೆಚ್ಚಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...