ರೀಟೇಲ್ ಹೂಡಿಕೆದಾರರಿಗೆ ತನ್ನ ಗುತ್ತಿಗೆ ಹಣಕಾಸು ಪರಿಹಾರಗಳಿಗಾಗಿ ಪರ್ಯಾಯ ಹೂಡಿಕೆ ವೇದಿಕೆಯಾದ ಗ್ರಿಪ್‌ನೊಂದಿಗೆ ಕೈಜೋಡಿಸಿರುವುದಾಗಿ ಹೀರೋ ಎಲೆಕ್ಟ್ರಿಕ್ ಗುರುವಾರ ತಿಳಿಸಿದೆ.
ಈ ಪಾಲುದಾರಿಕೆಯೊಂದಿಗೆ, ತನ್ನ ಎಲೆಕ್ಟ್ರಿಕ್ ವಾಹನಗಳ (ಇವಿಗಳು) ಅಳವಡಿಕೆಯನ್ನು ಉತ್ತೇಜಿಸುವ ಗುರಿ ಹೊಂದಿದ್ದು, ಇವಿಗಳ ಕೊನೆಯ-ಮೈಲಿ ವಿತರಣೆ, ಲಾಜಿಸ್ಟಿಕ್ಸ್ ಮತ್ತು ಇತರ ಇ-ಕಾಮರ್ಸ್ ದಿಗ್ಗಜರು ತಂತಮ್ಮ ವಾಹನಗಳನ್ನು ವಿದ್ಯುದ್ದೀಕರಿಸಲು ಉತ್ಸುಕರಾಗಿದ್ದಾರೆ. ಈ ಪಾಲುದಾರಿಕೆಯ ಅಡಿಯಲ್ಲಿ, 20,000 ಹೀರೋ ಎಲೆಕ್ಟ್ರಿಕ್ NYX ಸ್ಕೂಟರ್‌ಗಳನ್ನು ಗ್ರಿಪ್‌ನಿಂದ ಪಡೆಯಲಾಗುತ್ತದೆ ಹಾಗೂ ಪ್ರಸ್ತುತ ಕ್ಯಾಲೆಂಡರ್ ವರ್ಷದಲ್ಲಿ 10,000 ಸ್ಕೂಟರ್ ನಿಯೋಜನೆಯ ಗುರಿ ಹೊಂದಲಾಗಿದೆ.
ಮಾರ್ಚ್ 4 ರಂದು ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆ ಸಾಧ್ಯತೆ
“ಫ್ಲೀಟ್‌ಗಳ ವಿದ್ಯುದೀಕರಣವು ದೇಶದಾದ್ಯಂತ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಸರ್ಕಾರ ತೆಗೆದುಕೊಂಡಿರುವ ಪ್ರಮುಖ ಹೆಜ್ಜೆಗಳಲ್ಲಿ ಒಂದಾಗಿದೆ. ವಿತರಣೆ ಮತ್ತು ಇ-ಕಾಮರ್ಸ್ ವಿಭಾಗಗಳು ವೇಗವಾಗಿ ಬೆಳೆಯುತ್ತಿರುವ ವೇಳೆ, ಹೀರೋ ಎಲೆಕ್ಟ್ರಿಕ್ ವಿದ್ಯುದ್ದೀಕರಣಕ್ಕೆ ಬೆಂಬಲಿಸಲು ಮತ್ತು ಇವಿ ಪರಿವರ್ತನೆ ಅಭಿಯಾನ ಮುನ್ನಡೆಸುವ ಗುರಿಯನ್ನು ಹೊಂದಿದೆ,” ಎಂದು ಹೀರೋ ಎಲೆಕ್ಟ್ರಿಕ್ ಸಿಇಒ ಸೋಹಿಂದರ್ ಗಿಲ್ ತಿಳಿಸಿದ್ದಾರೆ.
ಈ ಪಾಲುದಾರಿಕೆಯು ಪರಿಸರ ಸ್ನೇಹಿ ಚಲನಶೀಲತೆ ಪರಿಹಾರಗಳನ್ನು ನೀಡುವ ಕಂಪನಿಯ ದೂರದೃಷ್ಟಿ ಮತ್ತು ಉಳಿತಾಯದ ವಿಷಯದಲ್ಲಿ ವಿದ್ಯುತ್ ಚಲನಶೀಲತೆಯನ್ನು ಅಳವಡಿಸಿಕೊಳ್ಳುವ ನೇರ ಪ್ರಯೋಜನವನ್ನು ಆದ್ಯತೆ ಮಾಡಿಕೊಂಡಿದೆ ಎಂದು ಗಿಲ್ ತಿಳಿಸಿದ್ದಾರೆ.
“ನಮ್ಮ ಸ್ಕೂಟರ್‌ಗಳನ್ನು ಗುತ್ತಿಗೆ ನೀಡಲು ಮತ್ತು ಪೂರೈಸಲು ಮತ್ತು ಇವಿಗಳು ಮತ್ತು ಇತರ ವಲಯಗಳ ಬೆಳವಣಿಗೆಯ ವೇಗಕ್ಕೆ ಕೊಡುಗೆ ನೀಡಲು ವಿಭಿನ್ನ ಮಾರ್ಗಗಳನ್ನು ಅನ್ವೇಷಿಸಲು ಇದರಿಂದ ನಮಗೆ ಸಾಧ್ಯವಾಗುತ್ತದೆ” ಎಂದು ಗಿಲ್ ಹೇಳಿದ್ದಾರೆ.