alex Certify ದೀಪಿಕಾ ಪಡುಕೋಣೆ ನಟಿಸಿದ್ರೆ ಮಾತ್ರ ನಾನೂ ನಟಿಸ್ತೇನೆ ಎಂದ ​ಬಾಂಗ್ಲಾ ನಟ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಿಕಾ ಪಡುಕೋಣೆ ನಟಿಸಿದ್ರೆ ಮಾತ್ರ ನಾನೂ ನಟಿಸ್ತೇನೆ ಎಂದ ​ಬಾಂಗ್ಲಾ ನಟ……!

ಹೀರೋ ಅಲೋಮ್ ನೆನಪಿದೆಯೇ ? ಬಾಂಗ್ಲಾದೇಶದ ಪ್ರಸಿದ್ಧ ಗಾಯಕ ಮತ್ತು ಇಂಟರ್ನೆಟ್ ಸೆಲೆಬ್ರಿಟಿ. ತನ್ನ ವಿಲಕ್ಷಣ ವರ್ತನೆಗಳಿಂದಲೇ ಜನಪ್ರಿಯನಾದವ. ಕೆಟ್ಟದಾಗಿ ಹಾಡುತ್ತಾನೆ ಎಂದು ಉಗಿಸಿಕೊಳ್ಳುತ್ತಲೇ ಪ್ರಸಿದ್ಧಿಗೆ ಬಂದವ.

ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಈತ ಈಗ ಸಿನಿಮಾದಲ್ಲಿ ಪ್ರವೇಶ ಬಯಸಿದ್ದಾನೆ. ಆದರೆ ಅಲ್ಲೊಂದು ಷರತ್ತು ವಿಧಿಸಿದ್ದಾನೆ. ನಟಿ ದೀಪಿಕಾ ಪಡುಕೋಣೆ ನಟಿಸಿದರೆ ಮಾತ್ರ ಭಾರತೀಯ ಸಿನಿಮಾ ಮಾಡುತ್ತೇನೆ ಎಂದಿದ್ದಾನೆ. ಈತನ ಈ ಹೇಳಿಕೆ ಮತ್ತೆ ವೈರಲ್​ ಆಗಿದ್ದು, ಇದರ ಬಗ್ಗೆ ಸಾಕಷ್ಟು ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

ಅಂದಹಾಗೆ ಅಲೋಮ್​, ಬಡ ಕುಟುಂಬದಲ್ಲಿ ಹುಟ್ಟಿದವ. ಹೆತ್ತವರು ಸಾಕಲಾಗದೆ ರಸ್ತೆ ಮೇಲೆ ಬಿಟ್ಟು ಹೋಗಿದ್ದರು, ಚಿಕ್ಕ ವಯಸ್ಸಿಯಿಂದ ಸಿನಿಮಾ ಕಡೆ ಹೆಚ್ಚಿನ ಆಸಕ್ತಿಯನ್ನ ಇಟ್ಟುಕೊಂಡಿದ್ದ ಈತ ಈಗ ಸಕತ್​ ಫೇಮಸ್​. ಹಾಡುಗಳ ಮೂಲಕ ಪ್ರಸಿದ್ಧಿ ಆಗಿದ್ದಾನೆ. ಕೆಲವು ಶಾರ್ಟ್ ಮೂವಿ ಮೂಲಕ ಬಹಳ ಪ್ರಸಿದ್ಧಿಯನ್ನ ಕೂಡ ಗಳಿಸಿಕೊಳ್ಳುತ್ತಾನೆ. ಗೂಗಲ್​ನಲ್ಲಿ ಸರ್ಚ್ ಆದ ಅತೀ ಹೆಚ್ಚು ನಾಯಕ ನಟರಲ್ಲಿ ಈತ ಕೂಡ ಒಬ್ಬ. ಈತನ ಬಳಿ ಸುಮಾರು 30 ಕೋಟಿ ರೂ. ಆಸ್ತಿ ಇದೆ.

ಸಣಕಲು ದೇಹ, ಕಪ್ಪು ವರ್ಣದ ಚರ್ಮ, ಉಬ್ಬು ಹಲ್ಲು ಮತ್ತು ಹಲವು ಕಾರಣಗಳಿಂದ ಈತ ಜನರಿಂದ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಒಳಗಾಗಿದ್ದ. ಸುಂದರ ಹುಡುಗಿಯರ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದ. ಈತನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...