
ಗೂಗಲ್‌ನಲ್ಲಿ ಎಸ್‌ಬಿಐ ಗ್ರಾಹಕ ಸೇವಾ ದೂರವಾಣಿ ಸಂಖ್ಯೆ ಹುಡುಕುವುದು ಎಷ್ಟು ಅಪಾಯಕಾರಿ ಎಂದು ದೇಶದ ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಟ್ವೀಟ್ ಮಾಡಿದೆ. ಗ್ರಾಹಕ ಸೇವಾ ದೂರವಾಣಿ ಸಂಖ್ಯೆಗಳಿಗೆ ಗ್ರಾಹಕರು ಎಸ್‌ಬಿಐನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕೆಂದು ಎಸ್‌ಬಿಐ ತಿಳಿಸಿದೆ.
“ಹುಸಿ ಗ್ರಾಹಕ ಸೇವಾ ಸಂಖ್ಯೆಗಳ ಬಗ್ಗೆ ಎಚ್ಚರಿಕೆ ಇರಲಿ. ದಯವಿಟ್ಟು ಎಸ್.ಬಿ.ಐ.ನ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಟ್ಟು ಸರಿಯಾದ ಗ್ರಾಹಕ ಸೇವಾ ಕೇಂದ್ರಗಳ ಸಂಖ್ಯೆಗಳನ್ನು ಪಡೆಯಿರಿ. ಬ್ಯಾಂಕಿಂಗ್‌ಗೆ ಸಂಬಂಧಿಸಿದ ವಿಶ್ವಾಸಾರ್ಹ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ,” ಎಂದು ಎಸ್.ಬಿ.ಐ. ಟ್ವೀಟ್ ಮಾಡಿದೆ.
ಕಣ್ಣಂಚನ್ನು ತೇವಗೊಳಿಸುತ್ತೆ ತಂದೆ ಕಳೆದುಕೊಂಡ ಬಾಲಕನಿಗಾಗಿ ಪೊಲೀಸರು ಮಾಡಿರುವ ಮಾನವೀಯ ಕಾರ್ಯ
ಎಸ್.ಬಿ.ಐ. ಅಥವಾ ಅದರ ಉದ್ಯೋಗಿಗಳು ಖಾತೆ ಸಂಖ್ಯೆಗಳು, ಡೆಬಿಟ್ ಕಾರ್ಡ್ ವಿವರಗಳು, ಅಂತರ್ಜಾಲದ ಬ್ಯಾಂಕಿಂಗ್ ವಿಳಾಸದ ವಿವರಗಳು ಅಥವಾ ಓಟಿಪಿಯಂಧ ಸೂಕ್ಷ್ಮ ವಿಷಯಗಳನ್ನು ಗ್ರಾಹಕರ ಬಳಿ ಎಂದಿಗೂ ಕೇಳುವುದಿಲ್ಲ ಎಂದು ಬ್ಯಾಂಕ್ ಮತ್ತೆ ಮತ್ತೆ ಒತ್ತಿ ಕೇಳುತ್ತಿದೆ.
ಎರಡು ದಿನಗಳ ಹಿಂದೆ, ಗ್ರಾಹಕ ಸುರಕ್ಷತೆ ದೃಷ್ಟಿಯಿಂದ ನಾಲ್ಕು ವಿಷಯಗಳನ್ನು ಎಸ್.ಬಿ.ಐ. ಹಂಚಿಕೊಂಡಿದೆ
1. ಅಪರಿಚಿತ ಮೂಲಗಳಿಂದ ಬರುವ ಎಸ್‌ಎಂಎಸ್/ಇಮೇಲ್‌ಗಳಲ್ಲಿರುವ ಲಿಂಕ್/ಅಟ್ಯಾಚ್‌ಮೆಂಟ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
2. ಅಪರಿಚಿತ ಮೂಲಗಳ ಮುಖಾಂತರ ಮೊಬೈಲ್ ಅಪ್ಲಿಕೇಶನ್ ಆಧರಿತ ದೂರವಾಣಿ ಕರೆಗಳು/ಇಮೇಲ್‌ಗಳನ್ನು ಡೌನ್ಲೋಡ್ ಮಾಡಬೇಡಿ.
3. ಆಧಾರ್ ಸಂಖ್ಯೆ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಡೆಬಿಟ್ ಕಾರ್ಡ್ ಸಂಖ್ಯೆ, ಪಿನ್, ಸಿವಿವಿ, ಅಂತರ್ಜಾಲ ಬ್ಯಾಂಕಿಂಗ್ ಬಳಕೆದಾರರ ಐಡಿ/ಪಾಸ್‌ವರ್ಡ್, ಓಟಿಪಿಗಳನ್ನು ಹಂಚಿಕೊಳ್ಳಬೇಡಿ.
4. ಕೆವೈಸಿ ಅಪ್ಡೇಟ್ ಮಾಡಿ ಎಂದು ಬ್ಯಾಂಕ್ ಯಾವತ್ತಿಗೂ ಲಿಂಕ್‌ಗಳನ್ನು ಕಳುಹಿಸುವುದಿಲ್ಲ.