![](https://kannadadunia.com/wp-content/uploads/2019/08/1510225661-jaggery.jpg)
ಬೆಲ್ಲ ಆ್ಯಂಟಿ ಆಕ್ಸಿಡೆಂಟ್ , ಸತು ಮತ್ತು ಸೆಲೆನಿಯಂನಂತಹ ಖನಿಜಗಳಿಂದ ತುಂಬಿರುತ್ತದೆ. ಇದು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುವ ಅಂಶಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ಚರ್ಮದ ರಕ್ಷಣೆಗೆ ಬೆಲ್ಲವನ್ನು ಬಳಸುವ ವಿಧಾನ ಇಲ್ಲಿದೆ.
ಜೀರ್ಣಕ್ರಿಯೆ, ದೇಹದ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಮತ್ತು ದೇಹದ ವಿಷವನ್ನು ತೆಗೆದು ಹಾಕಲು ಊಟದ ಬಳಿಕ ಪ್ರತಿದಿನ ಬೆಲ್ಲ ತಿನ್ನಲು ತಜ್ಞರು ಶಿಫಾರಸು ಮಾಡುತ್ತಾರೆ.
ಸಣ್ಣ ತುಂಡು ಬೆಲ್ಲ ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಚರ್ಮದ ಮೇಲೆ ರೇಖೆಗಳು, ಸುಕ್ಕುಗಳು ಅಥವಾ ಕಲೆಗಳನ್ನು ಕಡಿಮೆ ಮಾಡುತ್ತದೆ.
2 ಚಮಚ ಜೇನುತುಪ್ಪ, 1 ಚಮಚ ನಿಂಬೆ ರಸ ಮತ್ತು 2 ಚಮಚ ಬೆಲ್ಲವನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಮಸಾಜ್ ಮಾಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.
1 ಚಮಚ ಬೆಲ್ಲದ ಪುಡಿಗೆ ಟೊಮೆಟೊ ರಸವನ್ನು ಬೆರೆಸಿ ಕೆಲವು ಹನಿ ನಿಂಬೆ ರಸ ಮತ್ತು ಅರಶಿನ ಪುಡಿಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ತಣ್ಣೀರಿನಿಂದ ವಾಶ್ ಮಾಡಿ.