ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪಾಲಿಸಿದಾರರಿಗೆ ಆಧಾರ್ ಹಾಗೂ ಪಾನ್ ಲಿಂಕಿಂಗ್ ಕಡ್ಡಾಯವಾಗಿದೆ. ಇದಕ್ಕಾಗಿ ನೀವು ಹತ್ತಿರದ ಎಲ್‌ಐಸಿ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
BIG NEWS: ಜೆಡಿಎಸ್ ಜೊತೆ ಮೈತ್ರಿ ವಿಚಾರ; ಸಿಎಂ ಬೊಮ್ಮಾಯಿ ಹೆಗಲಿಗೆ ವಹಿಸಿದ ಬಿಜೆಪಿ
ಎಲ್‌ಐಸಿ ಪಾಲಿಸಿ ವೇಳೆ ನೋಂದಾಯಿತವಾದ ಮೊಬೈಲ್ ಸಂಖ್ಯೆ ಸಕ್ರಿಯವಾಗಿದ್ದಲ್ಲಿ ನಿಮಗೆ ಬರುವ ಓಟಿಪಿ ಬಳಸಿಕೊಂಡು ಸುಲಭವಾದ ಪ್ರಕ್ರಿಯೆ ಮೂಲಕ ಈ ಕೆಲಸ ಮಾಡಿ ಮುಗಿಸಬಹುದಾಗಿದೆ.
ಎಲ್‌ಐಸಿ-ಪಾನ್ ಲಿಂಕಿಂಗ್‌ಗಾಗಿ ಹೀಗೆ ಮಾಡಿ
* https://linkpan.licindia.in/UIDSeedingWebApp/ ಗೆ ಭೇಟಿ ನೀಡಿ.
* ನಿಮ್ಮ ಪಾಲಿಸಿ ವಿಭಾಗದಲ್ಲಿ Link PAN ಆಯ್ದುಕೊಳ್ಳಿ.
* ನಿಮ್ಮ ಜನ್ಮ ದಿನಾಂಕ, ಲಿಂಗ, ಇಮೇಲ್ ವಿಳಾಸ, ಪಾನ್, ಪೂರ್ಣ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಪಾಲಿಸಿ ಸಂಖ್ಯೆಯ ವಿವರಗಳನ್ನು ಎಂಟರ್ ಮಾಡಿ.
* ಇದಾದ ಮೇಲೆ declaration ಮೇಲೆ ಕ್ಲಿಕ್ ಮಾಡಿ.
* ಎಲ್ಲ ವಿವರಗಳನ್ನು ಎಂಟರ್ ಮಾಡಿದ ಬಳಿಕ ಕ್ಯಾಪ್ಚಾ ಎಂಟರ್ ಮಾಡಿ “Get OTP” ಮೇಲೆ ಕ್ಲಿಕ್ ಮಾಡಿ.