alex Certify ಅಪರೂಪದ ಬಿಳಿ ಬಣ್ಣದ ಜಿಂಕೆ ಮರಿ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಬಿಳಿ ಬಣ್ಣದ ಜಿಂಕೆ ಮರಿ ಫೋಟೋ ವೈರಲ್

ರಾಮಾಯಣದಲ್ಲಿ ಬರುವ ಬಂಗಾರದ ಜಿಂಕೆಯ ಕಥೆಯನ್ನ ನೀವೆಲ್ಲ ಕೇಳಿರ್ತಿರಾ? ಇದೇ ಬಂಗಾರದ ಜಿಂಕೆಗೆ ಮನಸೋತಿದ್ದಳು ಸೀತೆ. ರಾವಣ ಸೀತೆಯನ್ನ ಅಪಹರಿಸಬೇಕು ಎಂದುಕೊಂಡಾಗ, ಮಾರೀಚ ಅನ್ನೊ ರಾಕ್ಷಸ ಬಂಗಾರದ ಜಿಂಕೆಯ ಸೋಗಿನಲ್ಲಿ ಬಂದಿದ್ದು.

ರಾಮಾಯಣದ ಅಸಲಿ ಕಥೆ ಶುರುವಾಗಿದ್ದೇ ಅಲ್ಲಿಂದ. ಇದು ಬಂಗಾರದ ಜಿಂಕೆಯ ಕಥೆ. ಆದರೆ ಈಗ ಬೆಳ್ಳಿಯ ಜಿಂಕೆಯೊಂದು ಕಾಣಿಸಿಕೊಂಡಿದೆ. ಇದೇ ಬೆಳ್ಳಿಯ ಜಿಂಕೆಯ ಚಿತ್ರವನ್ನ ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವಿನ್ ಕಸ್ವಾನ್ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಕತರ್ನಿಯಾ ಘಾಟ್, ವನ್ಯಜೀವಿ ಅಭಯಾರಣ್ಯದಲ್ಲಿ ಅಲ್ಬೈನೋ ಜಿಂಕೆಯೊಂದು ಕಾಣಿಸಿಕೊಂಡಿದೆ. ಹೆಚ್ಚಾಗಿ ಆಫ್ರಿಕಾದಲ್ಲಿ ನೋಡ ಸಿಗುವ ಈ ಅಪರೂಪ ಪ್ರಜಾತಿಯ ಈ ಜಿಂಕೆಯ ಬಣ್ಣ ಬಿಳಿಯದ್ದಾಗಿರುತ್ತೆ. ಇದೇ ಕಾರಣಕ್ಕೆ ಅಲ್ಬೈನೊ ಎಂದು ಹೆಸರಿಡಲಾಗಿದೆ.

ಸಾಮಾನ್ಯವಾಗಿ ಜಿಂಕೆಗಳು ಬದಲಾಗುವ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತೆ. ಹಾಗೆ ಪ್ರಕೃತಿಯ ಕಾಲಮಾನಕ್ಕೆ ಒಗ್ಗಿಕೊಳ್ಳಲೆಂದೇ ಈ ಜಿಂಕೆಗಳಿಗೆ ಇವುಗಳ ಬಣ್ಣವೇ ವರ ಎಂದು ಕಸ್ವಾನ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ. 15 ವರ್ಷದ ಹಿಂದೆ ಒಡಿಶಾದ ಅಂಗುಲ್ ಜಿಲ್ಲೆಯಲ್ಲೂ ಇದೇ ರೀತಿಯ ಬಿಳಿಯ ಬಣ್ಣದ ಜಿಂಕೆಯೊಂದು ಕಾಣಿಸಿಕೊಂಡಿತ್ತು.

ಐಎಫ್ಎಸ್ ಅಧಿಕಾರಿ ಸುನಂದಾ ಅವರು ಕೂಡಾ ಈ ವಿಷಯವನ್ನು ಹೇಳಿದ್ದಾರೆ. ಆಗ ಅಂಗುಲ್ ಜಿಲ್ಲೆಯ ಲಬಂಗಿ ಅತಿಥಿ ಗ್ರಹದ ಬಳಿ ಕಾಣಿಸಿಕೊಂಡಿತ್ತು’ ಎಂದು ಕಳೆದು ಹೋದ ದಿನಗಳನ್ನ ನೆನಪಿಸಿಕೊಂಡಿದ್ದಾರೆ.

ಅಸಲಿಗೆ ಜಿಂಕೆಯ ಚರ್ಮ ಹೀಗೆ ಹೊಚ್ಚಹೊಳಪನ್ನ ಹೊಂದಲು ಕಾರಣ, ಅವುಗಳ ಚರ್ಮದಲ್ಲಿರುವ ಮೆಲನಿನ್ ಅಂಶ. ಇದರಿಂದಾಗಿಯೇ ಚರ್ಮದ ಬಣ್ಣ, ತುಪ್ಪಳದ ಬಣ್ಣ, ಕಣ್ಣುಗಳ ಬಣ್ಣವೂ ಬದಲಾಗಿರುತ್ತೆ. ಕೆಲವು ಬಾರಿ ಈ ಜಿಂಕೆಗಳ ಬಣ್ಣವೇ ಇವುಗಳಿಗೆ ಶಾಪವಾಗಿದೆ.

ಈ ಬಿಳಿಯ ಜಿಂಕೆ ಮರಿಯ ಚಿತ್ರವನ್ನ ನೋಡಿ ಕೆಲ ನೆಟ್ಟಿಗರು ಶಾಕ್ ಆಗಿದ್ದಾರೆ. ’ಜಿಂಕೆಗೆ ಇರುವ ಬಿಳಿಯ ಬಣ್ಣ, ಇನ್ನುಳಿದ ಕ್ರೂರ ಪ್ರಾಣಿಗಳು ಇವುಗಳ ಮೇಲೆ ದಾಳಿ ಮಾಡಲು ಸಹಾಯಕರವಾಗಿದೆ, ಎಂದು ಹೇಳಿದ್ಧಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...