ಮುಖದ ಮೇಲೆ ಸುಕ್ಕಿನ ಲಕ್ಷಣಗಳು ಗೋಚರಿಸುತ್ತಿವೆಯೇ? ತ್ವಚೆಯಲ್ಲಿ ನೆರಿಗೆ ಮೂಡಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ. ಕೆಮಿಕಲ್ ಬೆರೆಸಿದ ಮುಲಾಮುಗಳಿಗಿಂತ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ನಿಮ್ಮ ಸೌಂದರ್ಯ ಹೇಗೆ ವೃದ್ಧಿಸಬಹುದು ಎಂಬುದನ್ನು ನೋಡೋಣ.
ವಯಸ್ಸಾದ ಬಳಿಕ ಮುಖದಲ್ಲಿ ಕಪ್ಪು ಕಲೆ ಮತ್ತು ನೆರಿಗೆಗಳನ್ನು ಕಾಣಿಸಿಕೊಂಡರೆ ಮೊಟ್ಟೆಯ ಬಿಳಿ ಭಾಗಕ್ಕೆ ಒಂದು ಚಮಚ ನಿಂಬೆರಸ ಹಾಕಿ ಚೆನ್ನಾಗಿ ಕಲಕಿ. ಬಳಿಕ ಇದನ್ನು ಮುಖಕ್ಕೆ ತೆಳುವಾಗಿ ಹಚ್ಚಿ. ಒಣಗಿದ ತಕ್ಷಣ ಮತ್ತೆ ಹಚ್ಚಿ. 20 ನಿಮಿಷದ ಬಳಿಕ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ.
ಸಕ್ಕರೆಗೆ ಜೇನುತುಪ್ಪ ಬೆರೆಸಿ ಮುಖಕ್ಕೆ ಸ್ಕ್ರಬ್ ಮಾಡಿ. 5 ನಿಮಿಷ ಸ್ಕ್ರಬ್ ಮಾಡಿದ ಬಳಿಕ ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ಡೆಡ್ ಸ್ಕಿನ್ ಸಮಸ್ಯೆ ದೂರವಾಗುತ್ತದೆ. ತ್ವಚೆಯ ಕೊಳೆಯೂ ಇಲ್ಲವಾಗುತ್ತದೆ.
ದ್ರಾಕ್ಷಿಯ ರಸ ಹಿಂಡಿ ತೆಗೆಯಿರಿ. ಇದಕ್ಕೆ ರೋಸ್ ವಾಟರ್ ಸೇರಿಸಿ ಬೆರೆಸಿ. ಇದನ್ನು ಮುಖಕ್ಕೆ ನಯವಾಗಿ ಹಚ್ಚಿ ಮಸಾಜ್ ಮಾಡಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣ ಮುಖದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ತ್ವಚೆಯಲ್ಲಿ ಅಂಟಿರುವ ಜಿಡ್ಡಿನಾಂಶದಿಂದ ಮುಕ್ತಿ ನೀಡುತ್ತದೆ.